ರಷ್ಯಾ ಅಧ್ಯಕ್ಷನ ‘ರಹಸ್ಯ ರಾಣಿ’ ಕಥೆ ಇದು

742

ರಷ್ಯ ಅಧ್ಯಕ್ಷನ ರೂಮರ್ ಲವರ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ವಾಲ್ಡಿಮಿರ್ ಪುಟಿನ್ ಬದುಕಿನಲ್ಲಿ ಬಂದ ಆ ಬ್ಯೂಟಿಗೆ ಇದೀಗ ಅವಳಿ ಮಕ್ಕಳು ಜನಿಸಿವೆ ಅನ್ನೋ ಸುದ್ದಿ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆ, ವೆಬ್ ಪೇಪರ್ ಹಾಗೂ ಚಾನೆಲ್ ಗಳು ಪ್ರಸಾರ ಮಾಡ್ತಿವೆ. ಆದ್ರೆ, ಈ ಬಗ್ಗೆ ಪುಟಿನ್ ಆಗ್ಲಿ, ಆಕೆ ಆಗ್ಲಿ ಏನನ್ನೂ ಹೇಳ್ತಿಲ್ಲ.

ಈಕೆಯನ್ನ ರಷ್ಯದ ‘ಫಸ್ಟ್ ಸೀಕ್ರೆಟ್ ಲೇಡಿ’ ಅಂತಾ ಕರೆಯಲಾಗುತ್ತೆ. ಅಷ್ಟರ ಮಟ್ಟಿಗೆ ಇವರಿಬ್ಬರ ನಡುವಿನ ಸಂಬಂಧ ಗುಟ್ಟಾಗಿ ಉಳಿದಲ್ಲ. ಆದರೂ, ಈ ಜೋಡಿ ತಮ್ಮ ನಡುವಿನ ಸಂಬಂಧವನ್ನ ಹೇಳಿಕೊಂಡಿಲ್ಲ. ಆದ್ರೆ, ಅಮೆರಿಕಾ, ರಷ್ಯ, ಆಸ್ಟ್ರೇಲಿಯಾದ ತನಿಖಾ ಪತ್ರಕರ್ತರು ಈ ರೂಮರ್ಸ್ ಜೋಡಿಯ ಸಂಬಂಧಕ್ಕೆ ಸಾಕ್ಷಿ ನೀಡಿದ್ದಾರೆ. ಅವಳು ಬೇರೆ ಯಾರೂ ಅಲ್ಲ ಅಲಿನಾ ಕಬೇವಾ ಅನ್ನೋ ಸುಂದರಿ.

ಅಲಿನಾ ಕಿಬೇವಾ

ಅಲಿನಾ ಕಬೇವಾ ಯಾರು? ವಾಲ್ಡಿಮಿರ್ ಪುಟಿನ್ ಜೊತೆ ಈಕೆ ಸಂಬಂಧ ಬೆಳದಿದ್ದೇಗೆ? ಇವರು ಮದುವೆಯಾಗಿದ್ದು ನಿಜವೇ ಅನ್ನೋ ಪ್ರಶ್ನೆಗಳಿಗೆ ಉತ್ತರವಿದೆ. ಇದ್ಯಾವುದೂ ರಹಸ್ಯವಾಗಿ ಉಳಿದಿಲ್ಲ ಅಂತಾ ಹೇಳಿದ್ರೂ, ಒಂದು ಬಲಿಷ್ಟ ದೇಶದ ಅಧ್ಯಕ್ಷನ ರಹಸ್ಯ ಇಡೀ ಜಗತ್ತಿಗೆ ಗೊತ್ತಿದ್ರೂ ಏನನ್ನೂ ಹೇಳದೆ ಸೈಲೆಂಟ್ ಆಗಿರೋದು ಮಾತ್ರ ವಿಚಿತ್ರ.

ಜಿಮಾನಾಸ್ಟಿಕ್ ಆಡ್ತಿರುವ ಅಲಿನಾ

ಅಲಿನಾ ಯಾರು?

ಅಲಿನಾ ಕಿಬೇವಾ, ರಷ್ಯದ ಅಥ್ಲಟಿಕ್ ಆಟಗಾರ್ತಿ. ಒಲಿಂಪಿಕ್ ನಲ್ಲಿ ಚಿನ್ನ ಹಾಗೂ ಕಂಚು ಪದಕ ಗೆದ್ದವಳು. 14 ಬಾರಿ ವಿಶ್ವ ಚಾಂಪಿಯನ್ ಪದಕ ಪಡೆದವಳು. 25 ಬಾರಿ ಯುರೋಪಿಯನ್ ಚಾಂಪಿಯನ್ ಮೆಡಲ್ ಗೆದ್ದುಕೊಂಡವಳು. ಇಷ್ಟೆಲ್ಲ ಸಾಧನೆ ಮಾಡಿದ ಅಲಿನಾ, ಮುಂದೆ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾಳೆ. ಮೊದ್ಲೇ ಸ್ಟಾರ್ ಆಟಗಾರ್ತಿ ಆಗಿದ್ದ ಈಕೆ, ತನ್ನ ಸೌಂದರ್ಯದ ಮೂಲಕ ಕಲರ್ ಫುಲ್ ದುನಿಯಾದಲ್ಲಿ ಮಿಂಚಲು ಶುರು ಮಾಡ್ತಾಳೆ. ಸ್ಟಾರ್ ರಿಬ್ಬನ್ ಆ್ಯಂಡ್ ಬಾಲ್ ಜಿಮ್ನಾಸ್ಟ್ ಕೊಡ ಮಾಡುವ ‘ರಷ್ಯದ ಅತ್ಯಂತ ಸುಂದರ ಮಹಿಳೆ’ ಪ್ರಶಸ್ತಿಗೆ ಆಯ್ಕೆ ಆಗ್ತಾಳೆ.

ಒಲಿಂಪಿಕ್ ನಲ್ಲಿ ಅಲಿನಾ

ಅಲಿನಾ-ಪುಟಿನ್ ಲಿಂಕ್

2014ರಲ್ಲಿ ಪುಟಿನ್ ಹಾಗೂ ಅಲಿನಾ ಭೇಟಿಯಾಗ್ತಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪುಟಿನ್ ಹಾಗೂ ಅಲಿನಾ ಮುಖಾಮುಖಿಯಾಗ್ತಾರೆ. ಅಲ್ಲಿಂದ ಇವರ ನಡುವೆ ಒಡನಾಟ ಶುರುವಾಗುತ್ತೆ. 2013ರಲ್ಲಿ ಮೊದಲ ಪತ್ನಿ ಲೂದಿಮಿಲಾಳಿಂದ ಡಿವೋರ್ಸ್ ಪಡೆದಿದ್ದ ಪುಟಿನ್, 30 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದ. ಹೀಗಿರುವಾಗ ಅಲಿನಾಳ ಸೌಂದರ್ಯ ಪುಟಿನ್ ಮನಸ್ಸು ಪುಟಿಯುವಂತೆ ಮಾಡುತ್ತೆ. ಅವಳು ಸಹ ಪುಟಿನ್ ಜೊತೆ ಸಲುಗೆ ಇಟ್ಟುಕೊಳ್ತಾಳೆ. ಮುಂದೆ ಇವರು ರಹಸ್ಯವಾಗಿ ಮದುವೆ ಸಹ ಆದ್ರು ಅಂತಾರೆ. ಹೀಗಾಗಿ ಅಲಿನಾಳನ್ನ ‘ಫಸ್ಟ್ ಸೀಕ್ರೆಟ್ ಲೇಡಿ’ ಅಂತಾ ಕರೆಯಲಾಗುತ್ತೆ.

ಮೊದಲ ಪತ್ನಿ ಲೂದಿಮಾಳ ಜೊತೆ ಪುಟಿನ್

ಪುಟಿನ್ ಹಾಗೂ ಅಲಿನಾ ನಡುವಿನ ಸಂಬಂಧಕ್ಕೆ ಸಾಕ್ಷಿ ಎಂಬಂತೆ ಪುಟಿನ್ ಪಕ್ಷವಾದ ಪಿಪಲ್ ಫ್ರೆಂಟ್ ಪಾರ್ಟಿಯಿಂದ ಸಂಸದೆಯಾಗಿ ಆಯ್ಕೆ ಆಗ್ತಾಳೆ. ಇನ್ನು 2015ರಲ್ಲಿ ಅಲಿನಾ ಸ್ವಿರ್ಜರ್ಲೆಂಡ್ ನ ಆಸ್ಪತ್ರೆಯೊಂದರಲ್ಲಿ ಮೊದಲ ಮಗುವಿಗೆ ಜನ್ಮ ನೀಡ್ತಾಳೆ. ಇದು ಪುಟಿನ್ ಹಾಗೂ ಅಲಿಯಾ ಜೋಡಿಗೆ ಜನಿಸಿದ ಮಗು ಅಂತಾನೆ ಹೇಳಲಾಗುತ್ತೆ. ಇದರ ಬಗ್ಗೆ ಎಷ್ಟೇ ಸುದ್ದಿಯಾದ್ರೂ ಇವರಿಬ್ಬರು ಮಾತ್ರ ಸೈಲೆಂಟ್ ಆಗಿ ಉಳಿದು ಬಿಡ್ತಾರೆ. ಒಮ್ಮೆ ಪತ್ರಿಕಾಗೋಷ್ಠಿಯಲ್ಲಿ ಪುಟಿನ್ ಮದುವೆ ವಿಚಾರ ಪ್ರಸ್ತಾಪವಾಗುತ್ತೆ. ಆಗ ಆದಷ್ಟು ಬೇಗ ಉತ್ತರ ನೀಡುತ್ತೇನೆ ಅಂತಾ ಪುಟಿನ್ ಹೇಳಿದಾಗ, ಪತ್ರಕರ್ತೆಯೊಬ್ಬಳು ಅಲಿನಾ ಹೆಸರು ಹೇಳುತ್ತಾಳೆ. ಇದಕ್ಕೆ ಉತ್ತರಿಸದ ಪುಟಿನ್ ಸೈಲೆಂಟ್ ಆಗಿ ನಡೆದು ಬಿಡ್ತಾರೆ.

ಪುಟಿನ್ ಮತ್ತು ಅಲಿನಾ

ಇದು 66-36 ಲವ್ ಕಹಾನಿ

ಯೆಸ್, ರಷ್ಯ ಅಧ್ಯಕ್ಷ ವಾಲ್ಡಿಮಿರ್ ಪುಟಿನ್ ವಯಸ್ಸು 66. ಅಲಿನಾ ವಯಸ್ಸು ಜಸ್ಟ್ 36. ಅಂದ್ರೆ ಇವರಿಬ್ಬರ ನಡುವೆ ಬರೋಬ್ಬರಿ 30 ವರ್ಷಗಳ ಅಂತರವಿದೆ. ನಿಮ್ಗೊಂದು ವಿಷಯ ಗೊತ್ತಿರ್ಲಿ, ಪುಟಿನ್ ಮೊದಲ ಪತ್ನಿಯಿಂದ ಮರಿಯಾ ಹಾಗೂ ಏಕೇಟ್ರಿನಾ ಅನ್ನೋ ಇಬ್ಬರು ಹೆಣ್ಮಕ್ಕಳನ್ನು ಪಡೆಯುತ್ತಾರೆ. ಮರಿಯಾ ವಯಸ್ಸು 34, ಏಕೇಟ್ರಿನಾ ವಯಸ್ಸು 32. ಅಂದ್ರೆ, ಅಲಿನಾ ಇವರಿಗಿಂತ ಎರಡ್ಮೂರು ವರ್ಷ ಮಾತ್ರ ದೊಡ್ಡವಳು. ಹೀಗಾಗಿ ಇದನ್ನ 66-36 ಲವ್ ಕಹಾನಿ ಅನ್ನಬಹುದು. ಆದ್ರೆ, ಈಗ್ಲೂ ಅಲಿನಾಳನ್ನ ಪುಟಿನ್ ರೂಮರ್ ಲವರ್ ಅಂತಾನೆ ಕರೆಯುತ್ತಾರೆ.

ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ಕ್ಷಣ

ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಲಿನಾ

ಕಳೆದ ತಿಂಗಳು ಮಾಸ್ಕೋದ ವಿಐಪಿ ಆಸ್ಪತ್ರೆಯಲ್ಲಿ ಅಲಿನಾ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಅನ್ನೋದು ಇದೀಗ ಸುದ್ದಿಯಾಗಿದೆ. ಇಷ್ಟು ದಿನಗಳ ಕಾಲ ಗೌಪ್ಯವಾಗಿದ್ದ ವಿಷಯ ಇದೀಗ ಬಹಿರಂಗವಾಗಿದೆ. ಈ ಬಗ್ಗೆ ರಷ್ಯ, ಅಮೆರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ನ ನ್ಯಾಷನಲ್ ಪತ್ರಿಕೆಗಳು ವರದಿ ಮಾಡಿವೆ. ಪ್ರತಿಯೊಂದು ಸುದ್ದಿಯಲ್ಲಿ ಪುಟಿನ್ ರೂಮರ್ ಲವರ್ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ ಅಂತಾನೆ ಹೇಳಿದ್ದಾರೆ. ಈ ಮೂಲಕ ಅಲಿಯಾ ವಿಷ್ಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಮೊದಲ ಮಗುವಿನೊಂದಿಗೆ

ಇಲ್ಲಿ ವಯಸ್ಸು.. ಎರಡನೇ ಮದುವೆ.. ಅಜ್ಜನಾಗುವ ವಯಸ್ಸಿನಲ್ಲಿ ಅಪ್ಪನಾಗುವುದು ಅನ್ನೋ ಮಾತೇ ಬರುವುದಿಲ್ಲ. ಈ ಪ್ರೀತಿ, ಪ್ರೇಮ, ಪ್ರಣಯ ಅನ್ನೋ ವಿಚಾರದಲ್ಲಿ ಇದೆಲ್ಲವೂ ಗೌಣವಾಗಿ ಬಿಡುತ್ತೆ. ಪುಟಿನ್ ಜೀವನದಲ್ಲಿ ಅಲಿನಾ ಒಂದು ರಹಸ್ಯ ಪುಟವಾಗಿ ಉಳಿದು ಬಿಡುತ್ತಾಳಾ.. ಅಧಿಕೃತವಾಗಿ ರಷ್ಯಾದ ಮೊದಲ ಮಹಿಳೆ ಆಗ್ತಾಳಾ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಸಂಸತ್ತಿನಲ್ಲಿ ಅಲಿನಾ



Leave a Reply

Your email address will not be published. Required fields are marked *

error: Content is protected !!