ವಿಧಾನ ಪರಿಷತ್ ರದ್ದು: ಕೇಂದ್ರಕ್ಕೆ ಪ್ರಸ್ತಾವನೆ

443

ಆಂಧ್ರಪ್ರದೇಶ: ವಿಧಾನ ಪರಿಷತ್ ರದ್ದುಗೊಳಿಸುವ ಸಂಬಂಧ ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕ ಬಳಿಕ ಸಿಎಂ ಜಗನ್ ಮೋಹನರೆಡ್ಡಿ ನೇತೃತ್ವದ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಿದೆ. ನಿನ್ನೆ ಸಿಎಂ ನೇತೃತ್ವದಲ್ಲಿ ವಿಧಾನ ಪರಿಷತ್ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದಕ್ಕೆ ವಿಧಾನಸೌಧದಲ್ಲಿಯೂ ಅನುಮೋದನೆ ಸಿಕ್ಕಿದೆ.

ವಿಧಾನಸಭೆಯಲ್ಲಿ ಮಂಡಿಸಿದ್ದ ನಿರ್ಣಯದ ಪರ 133 ಮತಗಳು ಬಿದ್ರೆ, ವಿರುದ್ಧ ಯಾವುದೇ ಮತಗಳು ಬಿದ್ದಿರ್ಲಿಲ್ಲ. ಈ ಮೂಲಕ 2ನೇ ಬಾರಿಗೆ ವಿಧಾನ ಪರಿಷತ್ ನ್ನ ಆಂಧ್ರದಲ್ಲಿ ರದ್ದುಗೊಳಿಸಲಾಗಿದೆ. ವೈ.ಎಸ್ ರಾಜಶೇಖರ ರೆಡ್ಡಿ ಸಿಎಂ ಆಗಿದ್ದ ವಿಧಾನ ಪರಿಷತ್ ಶುರು ಮಾಡಲಾಗಿತ್ತು. ಇದೀಗ ಇದನ್ನ ವಿಸರ್ಜನೆ ಮಾಡಿರುವುದಕ್ಕೆ ಟಿಡಿಪಿ ಹಾಗೂ ಜನಸೇನೆ ವಿರೋಧಿಸಿವೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನ ಕಾಪಾಡಲು ವಿಧಾನ ಪರಿಷತ್ ಬೇಕು. ಇದನ್ನ ರದ್ದುಗೊಳಿಸಿರುವುದನ್ನ ಖಂಡಿಸಿ ನಾವು ಹೋರಾಟ ಮಾಡುತ್ತೇವೆ ಅನ್ನೋ ಎಚ್ಚರಿಕೆ ನೀಡಿವೆ.




Leave a Reply

Your email address will not be published. Required fields are marked *

error: Content is protected !!