ಸಿಂಪಲ್ ಮದುವೆ ಜೊತೆ ಸಮಾಜಮುಖಿ ಕಾರ್ಯ

343

ಚಂದನವನದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ ಫೆಬ್ರವರಿ 2ರಂದು ಸರಳವಾಗಿ ಸಂಸಾರಿಕ ಜೀವನಕ್ಕೆ ಕಾಲಿಡ್ತಿದ್ದಾರೆ. ಇದರ ಜೊತೆಗೆ ಅವರ ತಮ್ಮ ಮದುವೆಯ ಸವಿನೆನಪಿಗಾಗಿ ಆಶ್ರಮದ ಮಕ್ಕಳಿಗೆ ಹಾಸಿಗೆ ನೀಡ್ತಿದ್ದಾರೆ.

ಮೇಘಾ ಜೊತೆ ನಟ ಚೇತನ ವಲ್ಲಬ್ ನಿಕೇತನ ವಿನೋಭಾ ಭಾವೆ ಆಶ್ರಮದಲ್ಲಿ ಫೆಬ್ರವರಿ 2ರ ಸಂಜೆ 6 ಗಂಟೆಗೆ ಅನಾಥಾಶ್ರಮದ ಮಕ್ಕಳು ಹಾಗೂ ವೃದ್ಧರ ಜೊತೆಗೆ ಅತ್ಯಂತ ಸರಳವಾಗಿ ಮದುವೆಯಾಗ್ತಿದ್ದಾರೆ. ಇದರ ನೆನಪಿನಲ್ಲಿ ಆಶ್ರಮದ ಮಕ್ಕಳಿಗೆ ಹಾಸಿಗೆ ನೀಡ್ತಿದ್ದಾರೆ. ಈ ಬಗ್ಗೆ ಭಾವಿ ಪತ್ನಿ ಮೇಘಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಅಸ್ಸಾಂ ಮೂಲದ ಮೇಘಾ ಜೊತೆ ಚೇತನ ಮದುವೆಯಾಗ್ತಿದ್ದಾರೆ. ಇದು ಲವ್ ಆ್ಯಂಡ್ ಅರೇಂಜ್ ಮ್ಯಾರೇಜ್ ಆಗಿದೆ. ಇದಕ್ಕಾಗಿ ಸರಳವಾಗಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ. ಮದುವೆ ದಿನ ವಚನ-ಸೂಫಿ ಗಾಯನ, ಸಿದ್ದಿ, ಲಂಬಾಣಿ, ಕೊರಗ ನೃತ್ಯ ಪ್ರದರ್ಶನದ ಜೊತೆಗೆ ಪುಸ್ತಕ ಪ್ರದರ್ಶನ ಏರ್ಪಡಿಸುವ ಮೂಲಕ ತುಂಬಾ ವಿಶೇಷವಾಗಿ ಕಲ್ಯಾಣ್ಯೋತ್ಸವ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!