ಮೊದಲ ಹಂತದ ಮತದಾನ

327

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆ-2019ರ ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. 13 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ವೋಟಿಂಗ್ ಪ್ರಕ್ರಿಯೆ ಶುರುವಾಗಿದೆ.

ಗುಮ್ಲಾ, ಚತ್ರ, ಬಿಶನ್ ಪುರ, ಮಾನಿಕಾ, ಪಂಕಿ, ಲೋಹಾರದಾಗ್, ಲತೇಹರ್, ಬಿಶ್ರಾಂಪುರ, ಹಟತ್ತರಪುರ್, ಡಾಲ್ಟೋಂಗಂಜ್ ಗರ್ಹ್ವಾ, ಭಾವನಾಥಪುರ ಹಾಗೂ ಹುಸೇನಾಬಾದ್ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 3ಗಂಟೆಯ ತನಕ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಸೂಕ್ತ ಭದ್ರತೆ ಕಲ್ಪಿಸಿದೆ.

13 ಕ್ಷೇತ್ರಗಳಲ್ಲಿ 189 ಮಂದಿ ಕಣದಲ್ಲಿದ್ದು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದರಲ್ಲಿ 15 ಮಂದಿ ಇದ್ದಾರೆ. ಒಟ್ಟು 37 ಲಕ್ಷದ 83 ಸಾವಿರದ 55 ಮಂದಿ ಮತದಾರರಿದ್ದಾರೆ.




Leave a Reply

Your email address will not be published. Required fields are marked *

error: Content is protected !!