ಸಿಂದಗಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

419

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಬಸ್ ನಿಲ್ದಾಣದ ಎದುರಿಗೆ ಇರುವ ಸರ್ಕಾರಿ ಪ್ರೌಢ ಶಾಲೆಯ ಕ್ರೀಡಾ ಕೋಣೆಯ ಮುಂಭಾಗದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಅಂದಾಜು 50 ವರ್ಷದ ಮಹಿಳೆಯಾಗಿದ್ದು, ಗುರುತು ಪತ್ತೆಯಾಗಿಲ್ಲ. ಅಪರಿಚಿತ ಮಹಿಳೆ ವಾರಸದಾರರು ಯಾರು ಎಂದು ತಿಳಿದು ಬರದ ಕಾರಣ ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ.

ಮಾನಸಿಕ ಅಸ್ವಸ್ಥಳಂತೆ ಕಾಣುತ್ತಿದ್ದ ಮಹಿಳೆ ಕಳೆದ ಹಲವು ದಿನಗಳಿಂದ ಪಟ್ಟಣದ ಬೀದಿಗಳಲ್ಲಿ ತಿರುಗಾಡುತ್ತಿದ್ದಳಂತೆ. ಅಲ್ದೇ, ಯಾವುದೋ ರೋಗದಿಂದ ಬಳಲುತ್ತಿದ್ದ ಆಕೆ, ಶಾಲೆಯ ಕ್ರೀಡಾ ಕೋಣೆಯೊಂದರ ಮುಂದೆ ಮಲಗಿದ್ದಾಗ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!