ಪ್ರಜಾಸ್ತ್ರ ಕ್ರೀಡಾಸುದ್ದಿ
ಟೊಕಿಯೋ: ಒಲಿಂಪಿಕ್ಸ್ 2020ನಲ್ಲಿ ಭಾರತ ಕ್ರೀಡಾಪಟುಗಳು ಪದಕ ಬೇಟೆ ಮುಂದುವರೆದಿದೆ. 69 ಕೆಜಿ ವಿಭಾಗದ ಬಾಕ್ಸಿಂಗ್ ನಲ್ಲಿ ಲೆವ್ಲಿನಾ ಬೊರ್ಗೊಹೈನ್ ಅವರು ಕಂಚು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಇನ್ನೊಂದ್ಕಡೆ ಕುಸ್ತಿಪಟು ರವಿಕುಮಾರ ಫೈನಲ್ ತಲುಪುವ ಮೂಲಕ ಬಂಗಾರದ ಬೇಟೆಯ ಮೇಲೆ ಕಣ್ಣಿಟ್ಟಿದ್ದಾರೆ. 57 ಕೆಜಿ ವಿಭಾಗದ ಪುರುಷರ ಸೆಮಿಫೈನಲ್ ಪಂದ್ಯದಲ್ಲಿ ಕಝಕ್ ಸ್ಥಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ಸಂಜೆ 4 ಗಂಟೆಗೆ ನಡೆಯುವ ಫೈನಲ್ ಪಂದ್ಯದಲ್ಲಿ ರಷ್ಯದ ಝಾವೂರ್ ಉಗುವ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಲಿ ಎಂದು ಎಲ್ಲರ ಆಶಯವಾಗಿದೆ. ಕಡೆ ಪಕ್ಷ ಬೆಳ್ಳಿ ಬರುವುದು ಪಕ್ಕಾ ಆಗಿದೆ.