ಫೈನಲ್ ಗೆ ಎಂಟ್ರಿ ಕೊಟ್ಟ ಇಂಡಿಯನ್ ಟೀಂ

348

ಮೆಲ್ಬೋರ್ನ್: ಭಾರತೀಯ ಮಹಿಳಾ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಆಟವಾಡ್ತಿದೆ. ಸತತ ಗೆಲುವಿನ ಮೂಲಕ ಸೆಮಿ ಫೈನಲ್ ತಲುಪಿದ್ದ ಮೊದಲ ಟೀಂ ಆಗಿದ್ದ ಭಾರತ, ಇಂದು ಶ್ರೀಲಂಕಾವನ್ನ ಸೋಲಿಗೆ ಫೈನಲ್ ಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಭಾರತದ ಮಾರಕ ಬೌಲಿಂಗ್ ನಿಂದಾಗಿ ರನ್ ಗಳಿಸು ತಡವರಿಸಿದ್ರು. ಹೀಗಾಗಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 113 ರನ್ ಗಳಿಸಿತು. ಅಲ್ಪ ಮೊತ್ತದ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ, 3 ವಿಕೆಟ್ ಕಳೆದುಕೊಂಡು 14.4 ಓವರ್ ಗಳಲ್ಲಿ 116 ರನ್ ಗಳಿಸುವುದರೊಂದಿಗೆ 7 ವಿಕೆಟ್ ಗಳ ಜಯ ದಾಖಲಿಸಿತು.

ಈ ಪಂದ್ಯದಲ್ಲಿಯೂ ಶಫಾಲಿ ಶರ್ಮಾ ಭರ್ಜರಿ 47 ರನ್ ಗಳಿಸಿದ್ಳು. ಟೂರ್ನಿಯ ಪ್ರತಿಯೊಂದು ಪಂದ್ಯಲ್ಲಿ ಶಫಾಲಿ 40 ಪ್ಲಸ್ ರನ್ ಬಾರಿಸ್ತಿದ್ದಾಳೆ. ಶ್ರೀಲಂಕಾ ಪರ ಕ್ಯಾಪ್ಟನ್ ಚಮೀರಿ ಅಟಪಟು 33 ರನ್ ಗಳಿಸಿದ್ದು ಗರಿಷ್ಟ ಸ್ಕೋರ್ ಆಗಿದೆ. ಇನ್ನು ಭಾರತ ಪರ ರಾಧಾ ಯಾದವ 4 ಓವರ್ ಗಳಲ್ಲಿ 23 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ಬೆಸ್ಟ್ ಬೌಲಿಂಗ್ ದಾಖಲಿಸಿದ್ರು.




Leave a Reply

Your email address will not be published. Required fields are marked *

error: Content is protected !!