ಯೆಸ್ ಬ್ಯಾಂಕ್ ಸೂಪರ್ ಸೀಡ್: ಷೇರು ಮಾರುಕಟ್ಟೆ ತಲ್ಲಣ

374

ನವದೆಹಲಿ: ಯೆಸ್ ಬ್ಯಾಂಕ್ ನ್ನು ಆರ್ ಬಿಐ ಸೂಪರ್ ಸೀಡ್ ಮಾಡಿರುವ ಹಿನ್ನೆಲೆಯಲ್ಲಿ ಷೇರು ಪೇಟೆಯಲ್ಲಿ ಬಾರಿ ಕುಸಿತ ಕಂಡಿದೆ. ಕೇವಲ ಒಂದು ನಿಮಿಷದಲ್ಲಿ ಬರೋಬ್ಬರಿ 3 ಲಕ್ಷ ಕೋಟಿ ನಷ್ಟವಾಗಿದೆ.

ಹಣಕಾಸು ಇಲಾಖೆ ನಿನ್ನೆ ಸಂಜೆ ಹೊರಡಿಸಿರುವ ಸುತ್ತೋಲೆಯಲ್ಲಿ ಬ್ಯಾಂಕ್ ನಲ್ಲಿಟ್ಟಿರುವ ಹಣದಲ್ಲಿ 50 ಸಾವಿರ ರೂಪಾಯಿ ಮಾತ್ರ ವಿತ್ ಡ್ರಾ ಮಾಡಲು ಮಿತಿ ಹೇರಿದೆ. ಏಪ್ರಿಲ್ 3, 2020ರ ವರೆಗೆ ಇದು ಜಾರಿಯಲ್ಲಿರುತ್ತೆ ಎಂದು ತಿಳಿಸಿದೆ. ಬ್ಯಾಂಕ್ ನ ಆರ್ಥಿಕ ಸ್ಥಿತಿ ಸಾಕಷ್ಟು ಕುಸಿದಿರುವುದ್ರಿಂದ 30 ದಿನಗಳ ಕಾಲ ಸಿಬ್ಬಂದಿಯನ್ನ ವಜಾ ಮಾಡಲಾಗಿದೆ ಎಂದು ತಿಳಿಸಿದೆ.

ಈ ಬೆಳವಣಿಗೆಯಿಂದಾಗಿ ಷೇರು ಮಾರುಕಟ್ಟೆ ತಲ್ಲಣಗೊಂಡಿದೆ. ಷೇರು ವಹಿವಾಟಿನಲ್ಲಿ ಆರಂಭದಲ್ಲಿ ಭರ್ಜರಿ ಕುಸಿತಕಂಡಿದೆ. ಸನ್ಸೆಕ್ಸ್ 1 ಸಾವಿರ ಅಂಕ ಹಾಗೂ ನಿಫ್ಟಿ 320 ಅಂಕ ಕುಸಿತಗೊಂಡಿದೆ. ಇದ್ರಿಂದಾಗಿ ಒಂದು ನಿಮಿಷದಲ್ಲಿ 3 ಲಕ್ಷ ಕೋಟಿ ನಷ್ಟವಾಗಿದೆ ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!