ಪದ್ಮಶ್ರೀ ಪುರಸ್ಕೃತ ಹಿರಿಯ ಯೋಗಪಟು ನಿಧನ

336

ಕೊಯಮತ್ತೂರು: ದೇಶದ ಹಿರಿಯ ಯೋಗಪಟು ಎಂದೇ ಗುರುತಿಸಿಕೊಂಡಿದ್ದ 98 ವರ್ಷದ ನಾನಮ್ಮಾಳ್ ಶನಿವಾರ ನಿಧನ ಹೊಂದಿದ್ರು. ಈ ಬಗ್ಗೆ ಅವರ ಪುತ್ರ ಬಾಲಕೃಷ್ಣನ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಹಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಯೋಗ ಶಿಕ್ಷಣ ನೀಡುವ ಮೂಲಕ ತಮಿಳುನಾಡಿನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ರು. ತಮ್ಮದೆ ಯೂಟ್ಯೂಬ್ ಚಾನೆಲ್ ಮೂಲಕ ಯೋಗ ಕಲಿಸಿ ಕೊಡ್ತಿದ್ರು.

ಯೋಗ ಶಿಕ್ಷಕಿಯಾಗಿದ್ದ ನಾನಮ್ಮಳ್ ಆರೋಗ್ಯಪೂರ್ಣ ಜೀವನ ಹೇಗೆ ನಡೆಸಬೇಕೆಂದು ಹೇಳ್ತಿದ್ರು. ಯೋಗ ಸಾಧನೆಯಲ್ಲಿ ಇರುವ ಸಲ್ಲಿಸಿದ್ದ ಸೇವೆಗೆ ಭಾರತ ಸರ್ಕಾರದಿಂದ ಕಳೆದ ಜನವರಿಯಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!