ಮಲೆಯಾಳಂ ಸಂದರ್ಶನದಲ್ಲಿ ಕನ್ನಡದ ಹಾಡು ಗುನುಗಿದ ನಿತ್ಯಾ

393

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ನಟಿ ನಿತ್ಯಾ ಮೆನನ್ ಗಾಯಕಿಯೂ ಹೌದು. ಇತ್ತೀಚೆಗೆ ಬಾಲಿವುಡ್ ಮೂವಿ ಮಿಷನ್ ಮಂಗಲ್ ಸಿನ್ಮಾದಲ್ಲಿಯೂ ಮಿಂಚಿದ್ರು. ತೆಲುಗು, ತಮಿಳು, ಮಲೆಯಾಳಂ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ನಟಿ, ಕನ್ನಡದಲ್ಲಿ ಬೆರಳೆಣಿಕೆ ಸಿನ್ಮಾ ಮಾಡಿದ್ದಾರೆ. ಆದ್ರೆ, ಕನ್ನಡ ಮರೆತಿಲ್ಲ.

ಮಲೆಯಾಳಂ ಸಂದರ್ಶನದಲ್ಲಿ ಹಿಂದಿ, ತಮಿಳು, ತೆಲುಗು, ಇಂಗ್ಲಿಷ್ ಸೇರಿದಂತೆ ಆರೇಳು ಗೀತೆಗಳನ್ನ ಹಾಡಿದ್ರು. ನಿರೂಪಕಿ ಚೆಪ್ಪಾಳೆ ಹೊಡೆದ್ರು. ಆಗ ಮತ್ನಾಡಿದ ನಿತ್ಯಾ ನಾನು ಇನ್ನು ಕನ್ನಡ ಹಾಡು ಹಾಡಿಲ್ಲವೆಂದು ಹೇಳಿ, ಪವರ್ ಸ್ಟಾರ್ ಪುನೀತರಾಜಕುಮಾರ ಅಭಿನಯದ ಮಿಲನ ಚಿತ್ರದ ನಿನ್ನಿಂದಲೇ ನಿನ್ನಿಂದಲೇ ಅನ್ನೋ ಹಾಡನ್ನ ಹಾಡಿದ್ರು.

ನಟಿ, ಗಾಯಕಿಯಾಗಿರುವ ನಿತ್ಯಾ ಮೆನನ್ ಸೌಥ್ ಸಿನಿ ದುನಿಯಾದಲ್ಲಿ ಹೆಸರು ಮಾಡಿದ್ದಾರೆ. ಆದ್ರೆ, ಅವರು ಕನ್ನಡ ಭಾಷೆ ಮರೆತಿಲ್ಲ. ಮಲೆಯಾಳಂ ಸಂದರ್ಶನದಲ್ಲಿ ಕನ್ನಡ ಹಾಡು ಹಾಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!