ನಿತ್ಯಾ, ಪಾರ್ವತಿ ಕೊಟ್ಟ ಗುಡ್ ನ್ಯೂಸ್ ಏನದು?

206

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಹುಭಾಷಾ ನಟಿಯರಾದ ನಿತ್ಯಾ ಮೆನನ್ ಹಾಗೂ ಪಾರ್ವತಿ ತಿರುವೊತ್ತು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್ ವೈರಲ್ ಆಗಿತ್ತು. ಇಬ್ಬರು ನಟಿಯರು ಏಕಕಾಲದಲ್ಲಿ ಪ್ರಗ್ನೆನ್ಸಿ ಬಗ್ಗೆ ಸುದ್ದಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅನೇಕರಿಗೆ ಶಾಕ್. ಮದುವೆಯಾಗದೆ ತಾಯಿಯಂದಿರು ಆಗುತ್ತಿದ್ದಾರ ಎಂದು.

ಅಸಲಿ ವಿಷಯ ಇರೋದು, ಅದು ಸಿನಿಮಾವೊಂದರ ಪ್ರಮೋಷನ್ ಹಾಗೂ ಜನರು ಹೇಗೆಲ್ಲ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದು ಆಗಿತ್ತು. ಯೆಸ್, ಅಂಜಲಿ ಮೆನನ್ ನಿರ್ದೇಶನದಲ್ಲಿ ವಂಡರ್ ವುಮನ್ ಅನ್ನೋ ಸಿನಿಮಾ ಬರುತ್ತಿದೆ. ಅದರಲ್ಲಿ ನಟಿಯರಾದ ನಿತ್ಯಾ ಮೆನನ್, ಪಾರ್ವತಿ ತಿರುವೊತ್ತು, ಪದ್ಮಪ್ರಿಯಾ, ಸೈನೊರಾ ಫಿಲಿಪ್, ಅರ್ಚನಾ ಪದ್ಮಿನಿ ಹಾಗೂ ಅಮೃತಾ ಸುಭಾಷ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಇದೀಗ ರಿಲೀಸ್ ಆಗಿದೆ.

ಗರ್ಭಿಣಿಯರ ಭಾವನೆಗಳ ಕುರಿತಾದ ಚಿತ್ರವಾಗಿದೆ. ಬೇರೆ ಪ್ರದೇಶದ, ಬೇರೆ ಪದ್ಧತಿಯ ಗರ್ಭಣಿಯರು ಒಂದು ಕಡೆ ಸೇರಿ ತಾಯ್ತನದ ಅನುಭವ, ಈ ಸಂದರ್ಭದಲ್ಲಿ ತಾಯಿ ಹಾಗೂ ಮಗುವಿನ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳ ಮೇಲೆ ಕಥೆ ಸಾಗುತ್ತದೆ. ಜೊತೆಗೆ ಒಂದಡೆ ಸೇರಿದ ಹಲವು ಹೆಣ್ಮಕ್ಕಳ ಕಥೆ ತೆರೆದುಕೊಳ್ಳವ ಕುತೂಹಲವಿದೆ. ನವೆಂಬರ್ 18ರಂದು ವಂಡರ್ ವುಮನ್ ಚಿತ್ರ ಬಿಡುಗಡೆಯಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!