ಟಂಟಂ-ಕಾರ್ ಅಪಘಾತ: ಓರ್ವ ಮಹಿಳೆ ಸಾವು, 10 ಜನರಿಗೆ ಗಾಯ

463

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ಟಂಟಂಗೆ ಕಾರು ಡಿಕ್ಕಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ 10 ಜನರು ಗಾಯಗೊಂಡ ಘಟನೆ ಪಟ್ಟಣದ ಹೊರ ವಲಯದ ತುಕಾಯಿ ಡಾಬಾ ಹತ್ತಿರ ನಡೆದಿದೆ‌. ಇಂಗಳಗಿ ಮೂಲದ ಭಾರತಿ ಬಡಗೇರ(40) ಮೃತ ದುರ್ದೈವಿ.

ಗಾಯಾಳುಗಳನ್ನು ದೇವರಹಿಪ್ಪರಗಿ ಹಾಗೂ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಟಕನೂರಗೆ ಕೂಲಿ ಕೆಲಸಕ್ಕೆ ಹೋಗಿದ್ದು, ಕೆಲಸ‌ ಮುಗಿಸಿ ವಾಪಸ್ ಇಂಗಳಗಿಗೆ ಬರುವ ವೇಳೆ ಅವಘಡ ಸಂಭವಿಸಿದೆ. ಕಾರು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ದೇವರಹಿಪ್ಪರಗಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!