Search

2ನೇ ಪೋಕ್ಸೊ ಪ್ರಕರಣ: ಮುರುಘಾ ಶ್ರೀ ಪೊಲೀಸ್ ವಶಕ್ಕೆ

164

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಈಗಾಗ್ಲೇ ಬಂಧನಕ್ಕೆ ಒಳಗಾಗಿರುವ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಗಳನ್ನು 2ನೇ ಪ್ರಕರಣದಲ್ಲಿ ಪೊಲೀಸ್ ವಶಕ್ಕೆ ನೀಡಲಾಗಿದೆ. ನವೆಂಬರ್ 5ರ ತನಕ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

2ನೇ ಅಪರ ಹಾಗೂ ಜಿಲ್ಲಾ ನ್ಯಾಯಾಲಯ ಈ ಪ್ರಕರಣ ಸಂಬಂಧ ವಾದ ಪ್ರತಿವಾದ ಆಲಿಸಿತು. ಮೂರು ದಿನ ಪೊಲೀಸ್ ಕಸ್ಟಡಿಗೆ ಕೊಡಬೇಕು ಎಂದು ಪೊಲೀಸರು ವಾದಿಸಿದ್ದರು. ಅದರಂತೆ ಕೋರ್ಟ್ ನವೆಂಬರ್ 5ರ ತನಕ ಪೊಲೀಸ್ ವಶಕ್ಕೆ ನೀಡಿದೆ.

ಮೊದಲ ಪ್ರಕರಣದ ಜೊತೆಗೆ ಸ್ವಾಮೀಜಿಗಳ ವಿರುದ್ಧ ಮತ್ತೊಂದು ಪೋಕ್ಸೊ ಪ್ರಕರಣ ದಾಖಲಾಗಿದೆ. ಹೀಗಾಗಿ ಚಿತ್ರದುರ್ಗದ ಪೊಲೀಸರು ಮಕ್ಕಳ ರಕ್ಷಣಾ ಸಮಿತಿ ಸಮ್ಮುಖದಲ್ಲಿ ಸಿಆರ್ ಪಿಸಿ 161ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!