ಬ್ರಿಜ್ ಭೂಷಣ್ ವಿರುದ್ಧದ ಪೋಕ್ಸೋ ಕೇಸ್ ರದ್ದತಿಗೆ ಪೊಲೀಸರ ಒತ್ತಾಯ

134

ಪ್ರಜಾಸ್ತ್ರ ಸುದ್ದಿ

ದೆಹಲಿ: ಬಿಜೆಪಿ ಸಂಸದ, ಕುಸ್ತಿ ಫಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣ ರದ್ದತಿ ಕೋರಿ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಬಾಲಕಿಯರ ಹೆತ್ತರು ಪ್ರಕರಣ ವಾಪಸ್ ಪಡೆಯುವ ಹೇಳಿಕೆ ಹಾಗೂ ಈ ಪ್ರಕರಣ ಸಂಬಂಧ ಯಾವುದೇ ಸಾಕ್ಷಿ ಸಿಗದೆ ಹಿನ್ನಲೆಯಲ್ಲಿ ಪೋಕ್ಸೋ ಪ್ರಕರಣ ರದ್ದತಿಗೆ ಪೊಲೀಸರು ವರದಿ ಸಲ್ಲಿಸಿದ್ದಾರೆ.

ದೆಹಲಿ ಪೊಲೀಸರು ಗುರುವಾರ ಬ್ರಿಜ್ ಭೂಷಣ್ ವಿರುದ್ಧ 1,500 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. 354, 354ಡಿ, 354ಎ ಸೆಕ್ಷನ್ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಲೈಂಗಿಕ ಕಿರುಕುಳ ಆರೋಪ ವಿರುದ್ಧದ ಪ್ರಕರಣ ಸಂಬಂಧ 180ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿ ಮಾಹಿತಿ ಪಡೆಯಲಾಗಿದೆ.

ಇತ್ತೀಚೆಗೆ ದೆಹಲಿ ಪೊಲೀಸರು ಇಬ್ಬರು ಮಹಿಳಾ ಕುಸ್ತಿಪಟುಗಳನ್ನು ಕುಸ್ತಿ ಫಡರೇಷನ್ ಕಚೇರಿಗೆ ಕರೆದುಕೊಂಡು ಹೋಗಿ ತನಿಖೆ ನಡೆಸಿದ್ದರು. ಅಲ್ಲಿ ಅವರಿಗೆ ಲೈಂಗಿಕ ಕಿರುಕುಳ ಆರೋಪ ಸಂಬಂಧ ಆಡಿಯೋ, ವಿಡಿಯೋ, ಫೋಟೋ ಸಾಕ್ಷಿ ನೀಡುವಂತೆ ಕೇಳಿದ್ದಾರೆ. ಆದರೆ, ಅವರು ಯಾವುದೇ ಸಾಕ್ಷಿ ನೀಡಿಲ್ಲ. ಇನ್ನು ಬ್ರಿಜ್ ಭೂಷಣ್ ಸಂಬಂಧಿಕರು, ಸ್ನೇಹಿತರು, ಸಿಬ್ಬಂದಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಪೋಕ್ಸೋ ಪ್ರಕರಣ ವಿಚಾರಣೆ ಜುಲೈ 4ರಂದು ನಡೆಯಲಿದೆ. ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಕುಸ್ತಿಪಟುಗಳು ಎರಡು ಬಾರಿ ಪ್ರತಿಭಟನೆಯನ್ನು ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!