ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ವೈದ್ಯ, ಕೊರಿಯೋಗ್ರಾಫರ್ ಧನರ್ಶಿ ವರ್ಮಾ ಜೊತೆ ಎಂಗೇಜ್ ಮೆಂಟ್ ಆಗಿದ್ದಾರೆ. ಈ ಬಗ್ಗೆ ಸ್ವತಃ ಚಾಹಲ್ ಟ್ವೀಟರ್ ಮೂಲಕ ನಿಶ್ಚಾರ್ಥವಾಗಿರುವ ವಿಷಯವನ್ನ ತಿಳಿಸಿದ್ದಾರೆ.
ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಧನರ್ಶಿ ಕೊರಿಯೋಗ್ರಾಫರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ತಮ್ಮ ಜೀವನ ಸಂಗಾತಿ ಜೊತೆಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೌಲರ್ ಚಾಹಲ್ ಗೆ ಕ್ರಿಕೆಟ್ ಅಭಿಮಾನಿಗಳು ಶುಭ ಕೋರಿದ್ದಾರೆ.