10ನೇ ತರಗತಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

623

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2020-21ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಶಿಕ್ಷಣ ಸಚಿವರಾದ ಸುರೇಶಕುಮಾರ ಅವರು 10ನೇ ತರಗತಿಯ ಪರೀಕ್ಷಾ ದಿನಾಂಕ ಘೋಷಣೆ ಮಾಡಿದ್ದು, ಜೂನ್ 14ರಿಂದ ಜೂನ್ 25ರ ವರೆಗೆ ಪರೀಕ್ಷೆ ನಡೆಯಲಿವೆ.

ಜೂನ್ 14 ಪ್ರಥಮ ಭಾಷೆ, ಜೂನ್ 16 ಗಣಿತ, ಜೂನ್ 18 ಇಂಗ್ಲಿಷ್ ಹಾಗೂ ಕನ್ನಡ, ಜೂನ್ 21ರಂದು ವಿಜ್ಞಾನ, ಜೂನ್ 23 ಹಿಂದಿ ಹಾಗೂ ಜೂನ್ 25ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿವೆ ಎಂದು ತಿಳಿಸಿದ್ದಾರೆ. ಅಲ್ದೇ, ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ಷೇಪವಿದ್ದಲ್ಲಿ ಮನವಿ ಸಲ್ಲಿಸಬಹುದು ಎಂದಿದ್ದಾರೆ.

ಆಕ್ಷೇಪ ಸಲ್ಲಿಸುವವರು ಜನವರಿ 28 ರಿಂದ ಫೆಬ್ರವರಿ 26ರೊಳಗೆ ನಿರ್ದೇಶಕರು, ಪರೀಕ್ಷೆಗಳು, ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-3 ಇವರಿಗೆ ಅಂಚೆ ಮೂಲಕ ತಿಳಿಸಬಹುದು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!