ಕರೋನಾ ಮೆಟ್ಟಿ ನಿಂತ 36 ದಿನದ ಕಂದ

430

ಪ್ರಜಾಸ್ತ್ರ ಸುದ್ದಿ

ಮುಂಬೈ: ದೇಶದಲ್ಲಿಯೇ ಅತೀ ಹೆಚ್ಚು ಕರೋನಾ ಕೇಸ್ ಹಾಗೂ ಸಾವಿನ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ, 36 ದಿನದ ಹಸುಗೂಸು ಕರೋನಾ ವೈರಾಣು ವಿರುದ್ಧ ಹೋರಾಡಿ ಜಯಗಳಿಸಿದೆ. ಮಗುವಿಗೆ ಎಲ್ಲರು ಜೈಕಾರ ಹಾಕಿದ್ದಾರೆ.

ಕೇವಲ 36 ದಿನಗಳ ಹಿಂದೆ ಜನಿಸಿದ್ದ ಮಗುವಿಗೆ ಕೋವಿಡ್ 19 ಸೋಂಕು ಕಾಣಿಸಿಕೊಂಡಿತ್ತು. ಆ ಕಂದನಿಗೆ ಚಿಕಿತ್ಸೆ ನೀಡಲಾಗಿದ್ದು ಇದೀಗ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಈ ವೇಳೆ ಸಿಯಾನ್ ಆಸ್ಪತ್ರೆ ವೈದ್ಯರು, ನರ್ಸ್ ಚಪ್ಪಾಳೆ ತಟ್ಟಿ ಶುಭ ಕೋರಿದ್ದಾರೆ.

ಈ ಕಂದ ಗುಣಮುಖವಾಗುವ ಮೂಲಕ ಅನೇಕರಿಗೆ ಭರವಸೆ ಮೂಡಿಸಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗ್ತಿರುವ ವಿಡಿಯೋವನ್ನ ಅನೇಕರು ಹಂಚಿಕೊಂಡಿದ್ದಾರೆ. ಸಿಎಂ ಉದ್ಧವ್ ಠಾಕ್ರೆ, ಆಸ್ಪತ್ರೆ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಇದುವರೆಗೂ 1, 58,613 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 4,540 ಜನರು ಮೃತಪಟ್ಟಿದ್ದಾರೆ. 67,753 ಜನ ಗುಣಮುಖರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!