5000 ಟ್ರಿಲಿಯನ್ ಡಾಲರ್ ಆರ್ಥಿಕತೆ ರಹಸ್ಯ ಬಿಚ್ಚಿಟ್ಟ ಪಿ ಚಿದಂಬರಂ

409

ನವದಹಲಿ: ಇತ್ತೀಚೆಗಷ್ಟೇ ಮೋದಿ ನೇತೃತ್ವದ 2.0 ಸರ್ಕಾರ ತನ್ನ ಮೊದಲ ಬಜೆಟ್ ಮಂಡಿಸಿದೆ. ವಿತ್ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವಾರು ಕ್ಷೇತ್ರಗಳಿಗೆ ನೀಡ್ತಿರುವ ಕೊಡುಗೆ ಹಾಗೂ ಪ್ರಾಮುಖ್ಯತೆ ಏನು ಅನ್ನೋದರ ಜೊತೆಗೆ ಯಾವೆಲ್ಲ ಯೋಜನೆಗಳನ್ನ ಜಾರಿಗೆ ತರುತ್ತೇವೆ ಅನ್ನೋದನ್ನ ಸಹ ಹೇಳಿದ್ರು.

ಇದರ ಜೊತೆಗೆ ನಮ್ಮ ಸರ್ಕಾರಿ 5 ಸಾವಿರ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನ ಸಾಧಿಸುವ ಗುರಿಯನ್ನ ಹೊಂದಿದೆ ಅಂತಾ ಹೇಳಿದ್ರು. ಈ ಬಗ್ಗೆ ಮೋದಿ ಸರ್ಕಾರ ದೊಡ್ಡ ಸಾಧನೆ ಎಂದು ಕೊಳ್ತಿದೆ. ಆದ್ರೆ, ಇದೇನು ದೊಡ್ಡ ಸಂಗತಿಯಲ್ಲ ಅಂತಾ ಮಾಜಿ ವಿತ್ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ನೀರ್ಮಲಾ ಸೀತಾರಾಮನ್ ಅವರು ತುಂಬಾ ರಂಜಿತವಾಗಿ ಮಂಡಿಸಿದ ಬಜೆಟ್ ಭಾಷಣದ 5 ಸಾವಿರ ಟ್ರಿಲಿಯನ್ ಡಾಲರ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದನ್ನ ಭಾರತ ಸಾಧಿಸಿಯೇ ಸಾಧಿಸುತ್ತೆ. ಅದರ ಬಗ್ಗೆ ಯಾವುದೇ ಅನುಮಾನ ಬೇಡ ಅಂತಾ ಪಿ.ಚಿದಂಬರಂ ಹೇಳಿದ್ದಾರೆ.

ಆರ್ಥಿಕತೆ ಸಾಧಿಸುವುದು ಒಂದು ಸಹಜ ಪ್ರಕ್ರಿಯೆ. ಅದು ತನ್ನಿಂದ ತಾನೆ ಸಾಧಿಸುತ್ತದೆ ಅಂತಾ ಹೇಳಿರುವ ಪಿ.ಚಿದಂಬರಂ ಅಂಕಿಸಂಖ್ಯೆಗಳ ಮೂಲಕ ಇದರ ಹಿಂದಿನ ಸತ್ಯವನ್ನ ಬಿಚ್ಚಿಟ್ಟಿದ್ದಾರೆ. 1991ರಲ್ಲಿ ಭಾರತದ ಆರ್ಥಿಕತೆ 325 ಟ್ರಿಲಿಯನ್ ಡಾಲರ್ ಇತ್ತು. 2000ನೇ ಇಸ್ವಿಗೆ ಬರುವಷ್ಟರಲ್ಲಿ ಅದು ಡಬಲ್ ಆಯ್ತು. ಮುಂದೆ ಯುಪಿಎ ಸರ್ಕಾರ ಬಂದಿತು. 618 ಟ್ರಿಲಿಯನ್ ಡಾಲರ್ ನಿಂದ 1.22 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಯ್ತು. 2017ರ ವೇಳೆಗೆ 2.48 ಟ್ರಿಲಿಯನ್ ಡಾಲರ್ ಆಗಿದೆ ಅಂತಾ ಮಾಹಿತಿ ನೀಡಿದ್ರು.

ಭಾರತದ ನಾಮಿನಲ್ ಗ್ರೋತ್ ಶೇಕಡ 12ರಷ್ಟು ಇದೆ. ಹೀಗಾಗಿ ದೇಶದ ಆರ್ಥಿಕತೆ ಖಂಡಿತವಾಗಿ ದ್ವಿಗುಣವಾಗುತ್ತೆ. ಇದರಲ್ಲಿ ಯಾವುದೇ ದೊಡ್ಡತನವಿಲ್ಲ. ಇದನ್ನ ದೊಡ್ಡ ಸಾಧನೆ ಎನ್ನುವ ಬದಲು, ಬೇರೆ ಉತ್ತಮ ಯೋಜನೆಗಳ ಕಡೆ ಗಮನ ಹರಿಸಲಿ ಅಂತಾ ಹೇಳಿದ್ದಾರೆ. ಆರ್ಥಿಕತೆ ಸರಿ ಮಾಡಲು ಗಟ್ಟಿ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ. ಆ ಗಟ್ಟಿತನ ಮೋದಿಯವರಲ್ಲಿದೆ ಅಂತಾ ನಂಬಿದ್ದೇನೆ. ಹೀಗಾಗಿ ಬಜೆಟ್ ಹೊರತಾಗಿ ಹಲವು ನಿರ್ಧಾರಗಳನ್ನ ತೆಗೆದುಕೊಳ್ಳಬಹುದು ಅಂತಾ ಮಾಜಿ ವಿತ್ ಸಚಿವ ಪಿ.ಚಿದಂಬರಂ ಸಲಹೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!