ಎಲೆಕ್ಷನ್ ಬಳಿಕ 500 ವೀಲ್ ಚೇರ್ ಗಳು ಮೂಲೆಗುಂಪು

466

ಹುಬ್ಬಳ್ಳಿ: ಜನರಪ ಕಾಳಜಿ ಇರುವ ಅಧಿಕಾರಿಗಳು ಹಾಗೂ ಸರ್ಕಾರ ಇದ್ದಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಇಲ್ದೇ ಹೋದ್ರೆ ಎಲ್ಲವೂ ಈ ರೀತಿ ಧೂಳ್ ಹಿಡಿಯುತ್ತವೆ. ಲೋಕಸಭಾ ಚುನಾವಣೆ ಟೈಂನಲ್ಲಿ ವೃದ್ಧರು ಹಾಗೂ ವಿಕಚೇತನರನ್ನ ಮತಗಟ್ಟೆಗೆ ಕರೆತರಲು ಜಿಲ್ಲಾಡಳಿತ 500 ಕ್ಕೂ ಅಧಿಕ ವೀಲ್ ಚೇರ್ ಗಳನ್ನ ಖರೀದಿಸಿತ್ತು. ಇದೀಗ ಆ ಎಲ್ಲ ಚೇರ್ ಗಳು ಮೂಲೆಯಲ್ಲಿ ಬಿದ್ದು ಹಾಳಾಗಿ ಹೋಗ್ತಿವೆ.

ಹುಬ್ಬಳಿಯ ಚಿಟಗುಪ್ಪಿ ಆಸ್ಪತ್ರೆಯ ಕೊಠಡಿಯೊಂದರಲ್ಲಿ ವೀಲ್ ಚೇರ್ ಗಳ ರಾಶಿನೇ ಬಿದ್ದಿದೆ. ಹೊಸ ಚೇರ್ ಗಳು ಚುನಾವಣೆ ನಂತ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ವೃದ್ಧರಿಗೆ, ವಿಕಲಚೇತನರ ಅನುಕೂಲಕ್ಕೆ ಬಳಕೆ ಮಾಡುವುದು ಬಿಟ್ಟು, ಹಾಳು ಮಾಡ್ತಿರುವುದಕ್ಕೆ ಜಿಲ್ಲೆಯ ಜನತೆ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಜಿಲ್ಲಾಡಳಿತ ಮತ್ತು ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನ ಕೇಳಿದ್ರೆ, ಅವರು ಹೇಳಿದ್ದು ಹೀಗೆ..

ಚುನಾವಣಾ ಉದ್ದೇಶಕ್ಕಾಗಿ ವೀಲ್‍ಚೇರ್‍ಗಳನ್ನ ಖರೀದಿಸಲಾಗಿದೆ. ಮುಂಬರುವ ಚುನಾವಣೆಗಳಲ್ಲೂ ಇವುಗಳ ಅಗತ್ಯ ಇದೆ. ಅಂಗವಿಕಲರಿಗೆ, ವೃದ್ಧರಿಗೆ ಅನುಕೂಲವಾಗುವಂತೆ ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಕಚೇರಿ, ವೃದ್ಧಾಶ್ರಮಗಳಿಗೆ ವೀಲ್‍ ಚೇರ್ ವಿತರಿಸಲು ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಒಂದು ವೇಳೆ ಬಂದರೆ ಖಂಡಿತ ವಿತರಿಸಲಾಗುವುದು.

ದೀಪಾ ಚೋಳನ್, ಜಿಲ್ಲಾಧಿಕಾರಿ
ರೂಮಿನಲ್ಲಿ ಬಿದ್ದಿರುವ ವೀಲ್ ಚೇರ್ ಗಳು

ಸಾರ್ವಜನಿಕರು ಕಟ್ಟುವ ಟ್ಯಾಕ್ಸ್ ನಲ್ಲಿ ತಂದಿರುವ ವಸ್ತುಗಳಿವು. ಅಧಿಕಾರದಲ್ಲಿರುವವರು ಇದರ ಬಗ್ಗೆ ಕಾಳಜಿ ತೋರಿಸಿದಾಗ ಮಾತ್ರ ಜನರ ಸೇವೆ ಮಾಡಿದ್ದಂತೆ. ಇಲ್ದೇ ಹೋದ್ರೆ, ಬಡಜನರ ಗೋಳಾಟ ತಪ್ಪಿದ್ದಲ್ಲ.




Leave a Reply

Your email address will not be published. Required fields are marked *

error: Content is protected !!