ದಚ್ಚು, ಕಿಚ್ಚನಿಗೆ ‘ಸಾಹೋ’ ಠಕ್ಕರ್!

421

ಕುರುಕ್ಷೇತ್ರ, ಪೈಲ್ವಾನ್ ಗೆ ಠಕ್ಕರ್ ಕೊಡಲು ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಸಿನಿಮಾ ರೆಡಿಯಾಗ್ತಿದೆ. ನಟ ಪ್ರಭಾಸ್ ಅಭಿನಯದ ಬಹುನೀರಿಕ್ಷಿತ ‘ಸಾಹೋ’ ಚಿತ್ರದ ಟೀಸರ್ ಗುರವಾರ ರಿಲೀಸ್ ಆಗಿದೆ. ಇದನ್ನ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ಸಾಹೋ ಸಿನಿಮಾವನ್ನ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿದೆ. ಇದೇ ತಿಂಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಸೇರಿದಂತೆ ಮಲ್ಟಿ ಸ್ಟಾರ್ ಗಳು ಇರುವ ಕುರುಕ್ಷೇತ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಹ ರಿಲೀಸ್ ಆಗ್ತಿವೆ.

ಸಾಹೋ ಚಿತ್ರ ರಿಲೀಸ್ ನಿಂದಾಗಿ ಕನ್ನಡ ಸ್ಟಾರ್ ನಟರ ಚಿತ್ರಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಆಗಸ್ಟ್ 15 ಅಂತ ಡೇಟ್ ಅನೌನ್ಸ್ ಮಾಡಿರೋದ್ರಿಂದ ಆ ತಿಂಗಳಲ್ಲಿ ಬರುವ ಬಿಗ್ ಬಜೆಟ್ ನ ಈ ಎರಡು ಮೂವಿಗಳಿಗೆ ಠಕ್ಕರ್ ಕೊಡಬಹುದು ಅಂತಾ ಸಿನಿ ಪಂಡಿತರು ಮಾತ್ನಾಡ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!