ಟಿಕ್ ಟಾಕ್ ವ್ಯಸನಿ ವಿಷ ಕುಡಿದಿದ್ದೂ ಶೇರ್ ಮಾಡಿದ್ಳು..

1605

ಚೆನ್ನೈ: ಟಿಕ್ ಟಾಕ್ ಅನ್ನೋ ಆ್ಯಪ್ ಎಲ್ಲರನ್ನ ಹುಚ್ಚರಂತೆ ಮಾಡ್ತಿದೆ. ಈ ಬಗ್ಗೆ ಯಾರೂ ಎಷ್ಟು ಹೇಳಿದ್ರೂ ಕೇಳ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು, ಮಕ್ಕಳು, ಗೃಹಣಿಯರು, ಅಂಕಲ್ ಗಳು, ವಯಸ್ಸಾದವರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಟಿಕ್ ಟಾಕ್ ಮಾಡ್ತಿದ್ದಾರೆ. ಆದ್ರೆ, ಕೆಲವರು ಇದಕ್ಕೆ ದಾಸರಾಗಿ, ಟಿಕ್ ಟಾಕ್ ವ್ಯಸನಿಗಳಾಗ್ತಿದ್ದಾರೆ.

ಚೆನ್ನೈನ ಪೆರಂಬೂರ್ ಮೂಲದ 24 ವರ್ಷದ ಅನಿತಾ ಅನ್ನೋ ಗೃಹಣಿ ಟಿಕ್ ಟಾಕ್ ವ್ಯಸನಿಯಾಗಿದ್ದಳು. ಹೀಗಾಗಿ ಗಂಡ, ಮಕ್ಕಳ ಕಡೆ ಗಮನ ಕೊಡು ಅಂತಾ ಬುದ್ದಿವಾದ ಹೇಳಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದನ್ನೂ ಸಹ ಟಿಕ್ ಟಾಕ್ ನಲ್ಲಿ ಶೇರ್ ಮಾಡಿದ್ದಾಳೆ ಅಂದ್ರೆ, ಈಕೆ ಇದಕ್ಕೆ ಎಷ್ಟೊಂದು ಅಂಟಿಕೊಂಡಿದ್ದಳು ಅನ್ನೋದು ತಿಳಿಯುತ್ತೆ.

ಕೃಷಿ ವ್ಯಾಪಾರ ಮಾಡುವ ಪಳನಿವೇಲನ್ ಹಾಗೂ ಅನಿತಾ ದಂಪತಿಗೆ 4 ವರ್ಷದ ಹೆಣ್ಣು ಮಗು, 2 ವರ್ಷದ ಗಂಡು ಮಗುವಿದೆ. ಹೀಗಾಗಿ ಮನೆ, ಮಕ್ಕಳ ಕಡೆ ಗಮನ ಕೊಡು. ಮೊಬೈಲ್ ನಿಂದ ಮೊದಲು ಅದನ್ನ ಡಿಲಿಟ್ ಮಾಡುವ ಅಂತಾ ಗಂಡ ಬುದ್ದಿ ಹೇಳಿದ್ದಾನೆ. ಇದಕ್ಕೆ ಒಪ್ಪದ ಅನಿತಾ ಕೀಟನಾಶಕ ಸೇವಿಸಿ ಸೂಸೈಡ್ ಮಾಡಿಕೊಂಡಿದ್ದಾಳೆ. ಇದನ್ನೂ ಟಿಕ್ ಟಾಕ್ ಮೂಲಕ ಶೇರ್ ಸಹ ಮಾಡಿದ್ದಾಳೆ.

ಈ ಹಿಂದೆ ಟಿಕ್ ಟಾಕ್ ಮಾಡುವ ಟೈಂನಲ್ಲಿ ಮಗಳು ಬಿದ್ದು ಪೆಟ್ಟು ಮಾಡಿಕೊಂಡಿದ್ರೂ ಆ ಕಡೆ ಗಮನ ಕೊಟ್ಟಿರ್ಲಿಲ್ವಂತೆ. ಆಗ್ಲೂ ಕುಟುಂಬಸ್ಥರು ಬುದ್ದಿವಾದ ಹೇಳಿದ್ರೂ ಕೇಳಿರ್ಲಿಲ್ವಂತೆ. ವಿಷ ಸೇವಿಸಿದ್ದ ಅನಿತಾಳನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆದ್ರೆ, ಚಿಕಿತ್ಸೆಗೆ ಸ್ಪಂದಿಸಿದೆ ಸಾವನ್ನಪ್ಪಿದ್ದಾಳೆ. 24 ವರ್ಷಕ್ಕೆ ತನ್ನ ಜೀವವನ್ನ ತಾನೇ ಕಳೆದುಕೊಂಡ್ಳು. ಎರಡು ಪುಟ್ಟ ಮಕ್ಕಳು ಅನಾಥವಾದ್ವು.


TAG


Leave a Reply

Your email address will not be published. Required fields are marked *

error: Content is protected !!