ಅಕ್ರವಾಗಿ ಸಾಗಿಸುತ್ತಿದ್ದ 502 ಅಕ್ಕಿ ಚೀಲ ಸಿಂದಗಿಯಲ್ಲಿ ಪತ್ತೆ

689

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಅಕ್ರಮವಾಗಿ ಲಾರಿಯಲ್ಲಿ ಪಡಿತರ ಅಕ್ಕಿ ಸಾಗಾಟ ಮಾಡ್ತಿರುವುದು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿ ಪತ್ತೆಯಾಗಿದೆ. ಪಟ್ಟಣದ ಬ್ಯಾಕೋಡ್ ಬೈಪಾಸ್ ಬಳಿ ಕಳೆದ ರಾತ್ರಿ ಸುಮಾರು 2ಗಂಟೆ ಸಮಯದಲ್ಲಿ ಸಿಂದಗಿ ದಲಿತ ಸೇನೆ ಹಾಗೂ ಕಲಕೇರಿ ದಲಿತ ಸೇನೆಯ ಕಾರ್ಯಕರ್ತರು ಜಂಟಿಯಾಗಿ ಇದನ್ನು ಪತ್ತೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಲಾರಿಯನ್ನ ವಶಕ್ಕೆ ಪಡೆದ ಅಧಿಕಾರಿಗಳು ಸೋಮವಾರ ಸಂಜೆ 502 ಅಕ್ಕಿ ಚೀಲಗಳನ್ನ ಪಟ್ಟಣದ ಗೋದಾಮಿಗೆ ಸ್ಥಳಾಂತರಿಸಿದ್ದಾರೆ. ತಾಳಿಕೋಟೆಯಿಂದ 502 ಅಕ್ಕಿ ಚೀಲಗಳು ಅಕ್ರಮವಾಗಿ ಗುಜರಾತಿನ ಲಾಥೋರಿಗೆ ಸಾಗಾಟ ಮಾಡಲಾಗಿತ್ತಿತ್ತು ಅನ್ನೋದು ತಿಳಿದು ಬಂದಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!