Search

ಶಂಕರಣ್ಣನ ಅಭಿಮಾನಿಗಳಿಗೆ ಸಿಹಿ ಸುದ್ದಿ

152

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಕಂಡ ಅದ್ಭುತ ನಟ, ನಿರ್ದೇಶಕ, ದೂರದೃಷ್ಟಿಯುಳ್ಳ ಒಳ್ಳೆಯ ಮನಸ್ಸು ಅಂದರೆ ಕಾರಾಟೆ ಕಿಂಗ್ ಶಂಕರ್ ನಾಗ್ ಅವರು. ಅವರು ನಮ್ಮನ್ನು ಅಗಲಿ ಸುಮಾರು 3 ದಶಕಗಳು ಕಳೆದಿವೆ. ಆದರೆ, ಅವರ ಮೇಲಿನ ಅಭಿಮಾನ ಕಡಿಮೆಯಾಗಿಲ್ಲ. ಅವರ ಚಿತ್ರಗಳನ್ನು ಥಿಯೇಟರ್ ನಲ್ಲಿ ನೋಡದವರು ಸಹ ಅಭಿಮಾನಿಗಳಾಗಿದ್ದಾರೆ. ಅಂದರೆ, ಅವರ ನಿಧನದ ನಂತರ ಹುಟ್ಟಿದ ಪೀಳಿಗೆ ಸಹ ಶಂಕರಣ್ಣ ಅಂದರೆ ಪ್ರೀತಿ.

ಶಂಕರ್ ನಾಗ್ ಅವರು ಮಾಡಿದ ಪ್ರತಿಯೊಂದು ಸಿನಿಮಾಗಳು ಅದ್ಭುತ. ಅದರಲ್ಲೂ 1990ರಲ್ಲಿ ಬಂದ ಎಸ್.ಪಿ ಸಾಂಗ್ಲಿಯಾನ ಸಿನಿಮಾ ಸೃಷ್ಟಿಸಿದ ಹವಾನೇ ಬೇರೆ. ಸರಣಿಯಲ್ಲಿ ಬಂದ ಈ ಚಿತ್ರ ಭರ್ಜರಿ ಸಕ್ಸಸ್ ಕಂಡಿತು. ಇದೀಗ ಈ ಚಿತ್ರ ಮತ್ತೆ ಬೆಳ್ಳಿ ತೆರೆಗೆ ಬರುತ್ತಿದೆ. ಯಾರೆಲ್ಲ ಥಿಯೇಟರ್ ನಲ್ಲಿ ಈ ಚಿತ್ರ ನೋಡಿಲ್ಲವೋ ಅವರೆಲ್ಲ ಕಣ್ತುಂಬಿಕೊಳ್ಳಬಹುದು.

ಪಿ.ನಂಜುಡಪ್ಪ ಅವರ ನಿರ್ದೇಶನದ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಮಿಂಚಿದ ಶಂಕರ್ ನಾಗ್, ರಿಯಲ್ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರ ಖಡಕ್ ಬದುಕು ತೋರಿಸಿಕೊಟ್ಟರು. ರೆಬಲ್ ಸ್ಟಾರ್ ಅಂಬರೀಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಚಂದ್ರು, ವಜ್ರಮುನಿ, ದೇವರಾಜ್, ಅಶೋಕ್ ರೀತಿಯ ಘಟಾನುಘಟಿ ತಾರಾಬಳಗವಿದೆ. ಶಂಕರಣ್ಣಗೆ ಭವ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಮಂಜುನ ಮೋಡಿ ಇಲ್ಲಿಯೂ ಇದೆ. ನಾದಬ್ರಹ್ಮ ಹಂಸಲೇಖ ಅವರ ಸಂಗೀತದ ರಸದೌತಣವಿದೆ. ನವೆಂಬರ್ 18ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!