ಶೋಕಿ ಬೈಕ್ ವೀರರಿಗೆ ಖಾಕಿ ಶಾಕ್

391

ವಿಜಯಪುರ: ಇತ್ತೀಚಿನ ದಿನಗಳಲ್ಲಿ ಬೈಕ್ ಕ್ರೇಜ್ ಹೆಚ್ಚಾಗಿದ್ದು, ಅದರಲ್ಲೂ ಅತೀ ವೇಗವಾಗಿ ಬೈಕ್ ಚಲಾಯಿಸುವುದು ಹಾಗೂ ಕರ್ಕಸ ಶಬ್ಧ ಮಾಡುವ ಸೈಲೆನ್ಸರ್ ಅಳವಡಿಸಿಕೊಳ್ಳುವ ಹುಚ್ಚು ಯುವಕರಲ್ಲಿ ಮನೆ ಮಾಡಿದೆ. ಇನ್ಮುಂದೆ ಈ ರೀತಿ ಮಾಡಿದ್ರೆ, ನಿಮ್ಮ ಬೈಕ್ ಠಾಣೆಯ ಗುಜರಿ ಸೇರುತ್ತವೆ. ಇದರ ಜೊತೆಗೆ ಫೈನ್ ಸಹ ಕಟ್ಟಬೇಕಾಗುತ್ತೆ.

ಕೆಟ್ಟ ಶಬ್ಧ ಹೊಂದಿರುವ ಸೈಲೆನ್ಸರ್ ಅಳವಡಿಸಿ ನಗರದಲ್ಲಿ ಕಿರಿಕಿರಿ ಉಂಟು ಮಾಡ್ತಿರುವವರ ವಿರುದ್ಧ ಜಿಲ್ಲಾ ಪೂಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಯಾಕಂದ್ರೆ, ಇದ್ರಿಂದ ಸಿಟಿಯಲ್ಲಿ ಸಾಕಷ್ಟು ತೊಂದ್ರೆಯಾಗ್ತಿದ್ದು, ಹಿರಿಯರು, ಮಕ್ಕಳು ರಸ್ತೆಯಲ್ಲಿ ನಡೆಯಲು ಆಗದಂತಾ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪೊಲೀಸರು ಇಂಥಾ ಯುವಕರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸ್ತಿದ್ದಾರೆ.

ವಿಜಯಪುರ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಉಪ ವಿಭಾಗದ ಡಿಎಸ್ಪಿ ಅವರ ನೇತೃತ್ವದಲ್ಲಿ ಸಿಪಿಐ ಅವರು ಸಿಟಿಯಲ್ಲಿ ಹಾಗೂ ಪಿಎಸ್ಐ ಅವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚಾರಣೆ ನಡೆಸಿ, 71 ಬೈಕ್ ಗಳನ್ನ ಜಪ್ತಿ ಮಾಡಿದ್ದಾರೆ. ಅಲ್ದೇ 2,100ಕ್ಕೂ ಹೆಚ್ಚು ಕೇಸ್ ದಾಖಲಿಸಿಕೊಂಡು 2 ಲಕ್ಷದ 91 ಸಾವಿರಕ್ಕೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.

ಇನ್ನು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಸಿಂದಗಿ, ಇಂಡಿ ತಾಲೂಕುಗಳಲ್ಲಿಯೂ ಇಂಥಾ ಪ್ರಕರಣಗಳು ಕೇಳಿ ಬರ್ತಿದ್ದು, ಈ ಭಾಗದ ಯುವಕರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ. ಹೀಗಾಗಿ ಕಂಪನಿ ನೀಡಿದ ಸೈಲೆನ್ಸರ್ ಬಿಟ್ಟು ಶೋಕಿಗಾಗಿ ಕರ್ಕಸ ಸೌಂಡ್ ಮಾಡುವ ಸೈಲೆನ್ಸರ್ ಅಳವಡಿಸಿದ್ರೆ, ಅತೀ ವೇಗವಾಗಿ ಬೈಕ್ ಓಡಿಸಿದ್ರೆ ಬೀಳುತ್ತೆ ಸಾವಿರಾರು ರೂಪಾಯಿ ದಂಡ. ಟೈಂ ಕೈಕೊಟ್ಟರೆ ಬೈಕ್ ಜಪ್ತಿಯಾಗುತ್ತೆ ಹುಷಾರ್.


TAG


Leave a Reply

Your email address will not be published. Required fields are marked *

error: Content is protected !!