ನಾಳೆ ಕೀವಿಸ್ ಎದುರಿಸಲಿರುವ ಟೀಂ ಇಂಡಿಯಾ

448

ನಾಳೆ ಭಾರತ ನ್ಯೂಜಿಲೆಂಡ್ ವಿರುದ್ಧ ತನ್ನ ಮೂರನೇ ಪಂದ್ಯ ಆಡಲಿದೆ. ಮಧ್ಯಾಹ್ನ 3 ಗಂಟೆಗೆ ನಟ್ಟಿಂಗ್ ಹ್ಯಾಮ್ ನ ಟ್ರಂಟ್ ಬ್ರಿಡ್ಜ್ ಮೈದಾನದಲ್ಲಿ ಕೀವಿಸ್ ಪಡೆಯನ್ನ ಟೀಂ ಇಂಡಿಯಾ ಎದುರಿಸಲಿದೆ. ಸತತ ಮೂರು ಪಂದ್ಯಗಳನ್ನ ಗೆದ್ದು ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಟಾಪ್ ನಲ್ಲಿದೆ. ಅದೇ ರೀತಿ ಸಹ ಆಡಿರುವ ಎರಡು ಪಂದ್ಯಗಳನ್ನ ಗೆದ್ದು ಭಾರತ ಮೂರನೇ ಸ್ಥಾನದಲ್ಲಿದೆ.

ಪಾಯಿಂಟ್ ಪಟ್ಟಿ:

48 ಪಂದ್ಯಗಳಲ್ಲಿ ನಾಳೆ ನಡೆಯುವುದು 18ನೇ ಮ್ಯಾಚ್ ಆಗಿದೆ. ಎರಡು ಸ್ಟ್ರಾಂಗ್ ಟೀಂ ನಡುವೆ ನಡೆಯುವ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಆದ್ರೆ, ಭಾರತಕ್ಕೆ ಇದೀಗ ಆರಂಭಿಕ ಸಂಕಷ್ಟ ಎದುರಾಗಿದೆ. ಫಾರ್ಮ್ ನಲ್ಲಿರುವ ಶಿಖರ್ ಧವನ್ ಎಡಗೈ ಹೆಬ್ಬರಳಿಗೆ ಗಾಯವಾಗಿದ್ದು ಎರಡು ಪಂದ್ಯಗಳಿಗೆ ಅಲಭ್ಯನಾಗಿದ್ದಾನೆ. ಹೀಗಾಗಿ ಕೊಹ್ಲಿ ಪಡೆಗೆ ಈ ಕೊರತೆ ಕಾಡ್ತಿದೆ.

ಧವನ್ ಜಾಗದಲ್ಲಿ ರಿಶಭ್ ಪಂಥ್ ಆಡಲಿದ್ದಾನೆ ಎನ್ನಲಾಗ್ತಿದೆ. ಆದ್ರೆ, ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಕರ್ನಾಟಕದ ಆಟಗಾರ ಕೆ.ಎಲ್ ರಾಹುಲ್ ಬರುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಹೀಗಾಗಿ ನಾಳೆ ಅಂಗಳಕ್ಕೆ ಇಳಿದ ಮೇಲೆಯೇ ಯಾರೂ ಆಡ್ತಾರೆ ಅನ್ನೋದು ಗೊತ್ತಾಗಲಿದೆ.


TAG


Leave a Reply

Your email address will not be published. Required fields are marked *

error: Content is protected !!