ರಸ್ತೆ ಅಪಘಾತ, ತಾಯಿ, ಮಗ ಸಾವು

112

ಪ್ರಜಾಸ್ತ್ರ ಸುದ್ದಿ

ಹಾಸನ: ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಇದರಿಂದಾಗಿ ತಾಯಿ ಹಾಗೂ ಮಗ ಮೃತಪಟ್ಟ ಘಟನೆ ಬಿ.ಕಾಟಿಹಳ್ಳಿ ಇಂಡಸ್ಟ್ರಿಯಲ್ ವ್ಯಾಪ್ತಿಯಲ್ಲಿ ನಡೆದಿದೆ. ಕಮಲಮ್ಮ(70) ಹಾಗೂ ಸತೀಶ್(40) ಮೃತ ದುರ್ದೈವಿಗಳು.

ಈ ಪ್ರದೇಶದಲ್ಲಿ ಗೂಡ್ಸ್ ವಾಹನ, ಸಿಮೆಂಟ್ ಗಾಡಿಗಳು ತುಂಬಾ ವೇಗವಾಗಿ ಹೋಗುತ್ತಿವೆ. ಇದರಿಂದಾಗಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Leave a Reply

Your email address will not be published. Required fields are marked *

error: Content is protected !!