ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ಪ್ರೀತಿಯ ನಾಟಕವಾಡಿ ಯುವತಿಯ ನಗ್ನ ಚಿತ್ರಗಳನ್ನು ಪಡೆದು, ಬಳಿಕ ಅವುಗಳನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ಕಿರಾತಕನನ್ನ ಬಂಧಿಸಲಾಗಿದೆ. ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಯುವಕನೊಬ್ಬನನ್ನ ಬಂಧಿಸಿದ್ದಾರೆ.
ಮೂಲತಃ ಉತ್ತರಖಾಂಡದ ಘಾಜಿಯಾಬಾದ ನಿವಾಸಿ ರಾಜೇಂದ್ರಸಿಂಗ್ ಜೀವನಸಿಂಗ್ ಬಿಸ್ತಾ ಬಂಧಿತ ಆರೋಪಿಯಾಗಿದ್ದಾನೆ. ಈತ ನಗರದ ಯುವತಿಯನ್ನ ಪ್ರೀತಿಸುವ ನಾಟಕವಾಡಿ, ಅವಳ ನಗ್ನ ಚಿತ್ರಗಳನ್ನು ಪಡೆದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದಾನೆ ಎಂದು ಎಸ್ಪಿ ಅನುಪಮ್ ಅಗರವಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.