ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಂದನವನದ ಚಿತ್ರಗಳು ಸೇರಿದಂತೆ ಸೌಥ್ ಸಿನಿ ದುನಿಯಾದ ಸಿನಿಮಾಗಳು ಒಂದಾದ ಮೇಲೆ ಒಂದರಂತೆ ಹಿಟ್ ಆಗುತ್ತಿವೆ. ಕನ್ನಡದ ಚಿತ್ರಗಳು ಇಂದು ನೂರಾರು ಕೋಟಿ ಗಳಿಕೆ ಸಾಮಾನ್ಯವಾಗಿದೆ. ಸಾವಿರ ಕೋಟಿ ಗಳಿಕೆ ಸಹ ಮಾಡಿ ತೋರಿಸಲಾಗಿದೆ. ಆದರೆ, ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗ ಶೇಕ್ ಮಾಡುತ್ತಿದ್ದ ಬಾಲಿವುಡ್ ಈಗ ಮಕಾಡೆ ಮಲಗುತ್ತಿದೆ.
ಬಿಟೌನ್ ಅಂಗಳದಲ್ಲಿ ಖಾನ್ ಗಳು, ಕಪೂರ್ ಗಳು, ಚೋಪ್ರಾಗಳು ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರು, ಬ್ಯಾನರ್ ಗಳ ಅಡಿಯಲ್ಲಿ ಬರುತ್ತಿರುವ ಚಿತ್ರಗಳು ಫ್ಲಾಪ್ ಆಗುತ್ತಿವೆ. ಈಗ ಮತ್ತೊಂದು ಕನ್ನಡ ಚಿತ್ರದ ಜೊತೆಗೆ ಎರಡು ಬಾಲಿವುಡ್ ಚಿತ್ರಗಳು ಶುಕ್ರವಾರ ತೆರೆಗೆ ಬರುತ್ತಿವೆ.
ಗೋಲ್ಡನ್ ಸ್ಟಾರ್ ಗಣೇಶ್, ಯೋಗರಾಜ್ ಭಟ್ ಕಾಂಬಿನೇಷನ್ ಗಾಳಿಪಟ-2 ಚಿತ್ರ ಒಂದ್ಕಡೆಯಾದರೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ, ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರ ರಿಲೀಸ್ ಆಗುತ್ತಿವೆ. ಗಣಿ, ದಿಗಂತ್, ಪವನ್ ಕುಮಾರ್ ನಟನೆಯ ಗಾಳಿಪಟ-2 ಈಗಾಗ್ಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಟೀಸರ್, ಹಾಡು, ಟ್ರೇಲರ್ ನೋಡಿದವರು ಮತ್ತೊಂದು ಬ್ಲಾಕ್ ಬ್ಲಸ್ಟರ್ ಮೂವಿಗಾಗಿ ಕಾಯುತ್ತಿದ್ದಾರೆ. ಅತ್ತ ಲಾಲ್ ಸಿಂಗ್ ಛಡ್ಡಾ, ರಕ್ಷಾ ಬಂಧನ್ ಚಿತ್ರಕ್ಕೆ ಬಹಿಷ್ಕಾರದ ಬಿಸಿ ತಟ್ಟುತ್ತಿವೆ. ಹೀಗಾಗಿ ಆಗಸ್ಟ್ 12ರಂದು ರಿಲೀಸ್ ಆಗುತ್ತಿರುವ ಕನ್ನಡದ ಮೂವಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಡಲು ರೆಡಿಯಾಗಿದ್ದು, ನಾಳೆ ರಿಸಲ್ಟ್ ತಿಳಿಯಲಿದೆ.