ಅಭಿಜಿತ ಬ್ಯಾನರ್ಜಿಗೆ ಅರ್ಥಶಾಸ್ತ್ರ ನೊಬೆಲ್

441

ಭಾರತೀಯ ಮೂಲದ ಅಭಿಜಿತ ಬ್ಯಾನರ್ಜಿ ಸೇರಿದಂತೆ ಮೂವರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಜಾಗತಿಕ ಬಡತನವನ್ನ ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿರುವುದಕ್ಕೆ ಅಭಿಜಿತಗೆ ಈ ಪ್ರಶಸ್ತಿ ಲಭಿಸಿದೆ.

ಅಭಿಜಿತ ಜೊತೆ ಎಸ್ತರ್ ಡುಪ್ಲೋ ಹಾಗೂ ಮೈಕಲ್ ಕ್ರೆಮರ್ ಅವರಿಗೂ 2019ನೇ ಸಾಲಿನ ನೊಬೆಲ್ ಪ್ರಶಸ್ತಿ ನೀಡಲಾಗಿದೆ. 1998ರಲ್ಲಿ ಅಮರ್ತ್ಯ ಸೇನ್ ನೊಬೆಲ್ ಪ್ರಶಸ್ತಿ ಪಡೆದಿದ್ರು. ಇದೀಗ ಅಭಿಜಿತ ಬ್ಯಾನರ್ಜಿ ಎರಡನೇ ಭಾರತೀಯರಾಗಿದ್ದಾರೆ. ಇವರು ಭಾರತ-ಅಮೆರಿಕ ಮೂಲದ ಅರ್ಥಶಾಸ್ತ್ರಜ್ಞರಾಗಿದ್ದಾರೆ.

ಕೊಲ್ಕತ್ತಾದ ಪ್ರಸಿಡೆನ್ಸಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ದೀಪಕ ಬ್ಯಾನರ್ಜಿ ಹಾಗೂ ಕೊಲ್ಕತ್ತಾದ ಸಾಮಾಜಿಕ ವಿಜ್ಞಾನ ಕೇಂದ್ರದ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ನಿರ್ಮಲಾ ಬ್ಯಾನರ್ಜಿ ಅವರ ಪುತ್ರರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!