ಸಾಹಿತ್ಯ, ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಪ್ರಕಟ

352

ಸಾಹಿತ್ಯ ಮತ್ತು ರಸಾಯಾನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನ ಇಂದು ಘೋಷಣೆ ಮಾಡಲಾಗಿದೆ. ಸ್ವೀಡನ್ ರಾಯಲ್ ಸ್ಟೇಡಿಸ್ ಅಕಾಡೆಮಿ ಆಫ್ ಸೈನ್ಸ್ 2019ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನ ಜಾನ್ ಬಿ ಗುಡೆನೊ, ಎಂ ಸ್ಟ್ಯಾನ್ಲಿ ವಿಟ್ಟಿಂಗ್ ಹ್ಯಾಮ್ ಹಾಗೂ ಅಕಿರಾ ಯೋಶಿನೋ ಅವರು ಪಡೆದುಕೊಂಡಿದ್ದಾರೆ.

Image result for nobel prize chemistry 2019
ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು

ಲೀಥಿಯಂ ಇಯಾನ್ ಬ್ಯಾಟರಿಗಳ ಸಂಶೋಧನೆಯಲ್ಲಿ ಸಾಧನೆ ಮಾಡಿದ ಟೆಕ್ಸಾಸ್ ವಿವಿಯ ಜರ್ಮನ್ ಮೂಲದ ಜಾನ್ ಬಿ ಗುಡೆನೊ, ಬರ್ಮಿಂಗ್ ಹ್ಯಾಮ್ ವಿವಿಯ ಎಂ ಸ್ಟ್ಯಾನ್ಲಿ ವಿಟ್ಟಿಂಗ್ ಹ್ಯಾಮ್ ಹಾಗೂ ಮೀಜೋ ವಿವಿಯ ಪ್ರೊಫೆಸರ್ ಅಕಿರಾ ಯೋಶಿನೋಗೆ ನೊಬೆಲ್ ಪ್ರಶಸ್ತಿ ಸಿಕ್ಕಿದೆ.

ಸಾಹಿತ್ಯ ವಿಭಾಗದಲ್ಲಿ 2018ನೇ ಸಾಲಿನ ಪ್ರಶಸ್ತಿ ಪಡೆದವರು

2018 ಹಾಗೂ 19ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ಸಾಹಿತಿಗಳ ಹೆಸರು ಪ್ರಕಟಿಸಲಾಗಿದೆ. 2018ನೇ ಸಾಲಿನ ಪ್ರಶಸ್ತಿಯನ್ನ ಪೊಲ್ಯಾಂಡ್ ಲೇಖಕಿ ಓಲ್ಗಾ ಟೊಕುರ್ಕುಜ್ ಗೆ ನೀಡಲಾಗಿದೆ. 2019ನೇ ಸಾಲಿನ ಪ್ರಶಸ್ತಿಯನ್ನ ಆಸ್ಟ್ರಿಯಾದ ಲೇಖಕ ಪೀಟರ್ ಹುಡ್ಕೆಗೆ ನೀಡಲಾಗಿದೆ.

ಸ್ವೀಡಿಶ್ ಅಕಾಡೆಮಿಯಲ್ಲಿ 2018ರಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ರಿಂದ ಪ್ರಶಸ್ತಿ ಪ್ರಕಟಣೆ ಮಾಡಿರ್ಲಿಲ್ಲ. ಹೀಗಾಗಿ ಸಾಹಿತ್ಯ ವಿಭಾಗದಲ್ಲಿ 2018ನೇ ಸಾಲಿನ ಪ್ರಶಸ್ತಿಯನ್ನ ಇಂದು ಘೋಷಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!