ಪೊಲೀಸ್ ವಾಹನ ಹಾಗೂ ಇನೋವಾ ನಡುವೆ ಅಪಘಾತ

382

ಪ್ರಜಾಸ್ತ್ರ ಸುದ್ದಿ

ಧರ್ಮಸ್ಥಳ(ದಕ್ಷಿಣ ಕನ್ನಡ): ಪೊಲೀಸ್ ಕಾನ್ ವೇ ವಾಹನ ಹಾಗೂ ಇನೋವಾ ವಾಹನದ ನಡುವೆ ಶನಿವಾರ ಮುಂಜಾನೆ ಸುಮಾರು 7 ಗಂಟೆ ವೇಳೆಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಧರ್ಮಸ್ಥಳದ ಹೊರವಲಯದಲ್ಲಿ ನಡೆದಿದೆ.

ಧರ್ಮಸ್ಥಳದಿಂದ ಕುಕ್ಕೆ ಕಡೆಗೆ ಹೊರಟಿದ್ದ ಪೊಲೀಸ್ ಚಾಲನ ತರಬೇತಿ ವಾಹನಕ್ಕೆ ಎದುರಿನಿಂದ ಬಂದ ಇನೋವಾ ವಾಹನ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಪೊಲೀಸ್ ಕಾನ್ ವೇ ವಾಹನ ಪಲ್ಟಿಯಾಗಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ. ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸ್ ವಾಹನ ಚಾಲನಾ ತರಬೇತಿ ಶಿಕ್ಷಕರಾದ ರಾಘವೇಂದ್ರ ಹಳ್ಳಿ ಹಾಗೂ ಫಕ್ಕಿರೇಶ್ ಅವರ ಜಾಗೃತಿಯಿಂದಾಗಿ 20 ಜನರ ಜೀವ ಉಳಿದಿದೆ.

ಬೆಂಗಳೂರಿನ ಯಲಹಂಕದ ಹತ್ತಿರ ಇರುವ ಪೊಲೀಸ್ ವಾಹನ ಚಾಲನಾ ತರಬೇತಿ ಹಾಗೂ ಸಂರಕ್ಷಣಾ ಶಾಲೆಯ 10 ವಾಹನಗಳು ನಿನ್ನೆ ಬೆಂಗಳೂರು ಬಿಟ್ಟು ರಾತ್ರಿ ಧರ್ಮಸ್ಥಳ ತಲುಪಿದ್ದವು. ಇಂದು ಮುಂಜಾನೆ ಕುಕ್ಕೆ ಕಡೆಗೆ ಹೊರಟಿದ್ದಾಗ ಈ ಘಟನೆ ನಡೆದಿದೆ. ಇನೋವಾ ವಾಹನದಲ್ಲಿ ಐವರಿದ್ದರು ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!