ಬಿಟೌನ್ ಬ್ಯೂಟಿ ಐಶುಗೆ ನೋಟಿಸ್

183

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ ನೋಟಿಸ್ ನೀಡಲಾಗಿದೆ. ಅದು ಭೂ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ. ಮಹಾರಾಷ್ಟ್ರದ ಸಿನ್ನಾರ್ ನಲ್ಲಿರುವ ತಮ್ಮ ಜಮೀನಿಗೆ ತೆರಿಗೆ ಪಾವತಿಸದ ಕಾರಣ ನಾಸಿಕ್ ಜಿಲ್ಲಾಡಳಿತದಿಂದ ನೋಟಿಸ್ ನೀಡಲಾಗಿದೆ.

ನಟಿ ಐಶ್ವರ್ಯ 21,960 ರೂಪಾಯಿ ತೆರಿಗೆ ಪಾವತಿಸಬೇಕಿದೆ. 10 ದಿನಗಳ ಒಳಗೆ ಪಾವತಿ ಮಾಡದೆ ಹೋದರೆ ಕಾನೂನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಕೋಟ್ಯಾಂತರ ರೂಪಾಯಿ ಒಡತಿ ನಟಿ ಐಶ್ವರ್ಯ, ಕೇವಲ 21,960 ತೆರಿಗೆ ಪಾವತಿಸದೆ ಹೋಗಿರುವುದು ಅಚ್ಚರಿ ಮೂಡಿಸಿದೆ.

ಇನ್ನು ನಟಿ ಐಶ್ವರ್ಯ ಜೊತೆಗೆ 1,200 ಜನರಿಗೂ ಸಹ ನೋಟಿಸ್ ನೀಡಲಾಗಿದೆ. 2022-2023ರ ಮಾರ್ಚ್ ಒಳಗೆ ಮುಗಿಯುವ ಹಣಕಾಸು ವರ್ಷದೊಳಗೆ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ವಸೂಲಿ ಕೆಲಸ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!