ಇನ್ಸ್‌ಪೆಕ್ಟರ್ ಅಗಸಿಮನಿ ವಿರುದ್ಧ ಮಹಿಳಾ ಸಿಬ್ಬಂದಿ ಕಿರುಕುಳ ಆರೋಪ?

616

ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್

ಧಾರವಾಡ: ಇಲ್ಲಿನ ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ವೈ.ಡಿ.ಅಗಸಿಮನಿಯವರ ವಿರುದ್ಧ ಅದೇ ಠಾಣೆಯ (ಪಿಸಿ ಡಬ್ಲ್ಯು) ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಕಿರುಕುಳ ಆರೋಪದ ದೂರು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಇನ್ಸ್ ಪೆಕ್ಟರ್ ವೈ.ಡಿ.ಅಗಸಿಮನಿ

ಇನ್ಸ್ ಪೆಕ್ಟರ್ ಅಗಸಿಮನಿಯವರು ಕರ್ತವ್ಯದ ವೇಳೆ ಮಹಿಳಾ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಬಲವಂತವಾಗಿ ಕೈ ಹಿಡಿದು ಎಳೆದು ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಅದೇ ಠಾಣೆಯ ಮಹಿಳಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮೂರು ಪುಟಗಳ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದ ಕುರಿತು ಇಲಾಖೆ ಹಂತದಲ್ಲಿ ತನಿಖೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಈಗಲೇ ಇದರ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ಸಂಪೂರ್ಣ ತನಿಖೆ ನಂತರ ಮಾಹಿತಿ ನೀಡಲಾಗುವುದು.

ಲೋಕೇಶ್ಗಲಸರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಧಾರವಾಡ

ಇನ್ಸ್ ಪೆಕ್ಟರ್ ಅಗಸಿಮನಿಯವರ ವಿರುದ್ಧ ಈ ಹಿಂದೆಯೂ ಇದೆ ರೀತಿಯ ಕಿರುಕುಳದ ಆರೋಪಗಳು ಕೇಳಿ ಬಂದಿದ್ದು, ಇವರ ಕಾಟಕ್ಕೆ ಬೇಸತ್ತು ಕೆಲವರು ವರ್ಗಾವಣೆಯಾಗಿದ್ದಾರಂತೆ. ಈ ಅಂಶಗಳು ಮಹಿಳಾ ಸಿಬ್ಬಂದಿ ನೀಡಿರುವ ದೂರಿನಲ್ಲಿವೆಯಂತೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆದು ಅವರಿಗೆ ರಕ್ಷಣೆ ನೀಡಬೇಕಾದ ಮಹಿಳಾ ಠಾಣೆಯಲ್ಲಿಯೇ ಮಹಿಳಾ ಸಿಬ್ಬಂದಿಗೆ ಅಸುರಕ್ಷತೆ ಕಾಡುತ್ತಿದೆ ಎಂದರೆ, ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುವುದು ನಿಶ್ಚಿತ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸಂಪೂರ್ಣ ತನಿಖೆ ನಡೆಸಿ, ನೊಂದ ಮಹಿಳಾ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು ಎಂದು ಮಹಿಳಾ ಪರ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!