ಅಪ್ಪು ಅಭಿಮಾನಿಗಳ ಹೋರಾಟಕ್ಕೆ ಮಣಿದ ಟ್ವೀಟರ್

172

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಕಣ್ಮರೆಯಾಗಿ 9 ತಿಂಗಳು ಕಳೆದಿವೆ. ಆದರೆ, ನಾಡಿನ ಪ್ರತಿಯೊಬ್ಬರ ಮನದಲ್ಲಿ ಅಪ್ಪು ಅಜರಾಮರ. ಸ್ಟಾರ್ ನಟ ನಟಿಯರು, ವಿವಿಐಪಿ, ವಿಐಪಿಗಳಿಗೆ ಟ್ವೀಟರ್ ನಲ್ಲಿ ಬ್ಲೂ ಟಿಕ್ ನೀಡಲಾಗುತ್ತೆ. ಈ ಮೂಲಕ ಅಸಲಿ, ನಕಲಿ ಅಕೌಂಟ್ ಗುರುತಿಸಬಹುದು. ಹೀಗಿರುವಾಗ ಪುನೀತ್ ಅವರ ಟ್ವೀಟರ್ ಖಾತೆಯಲ್ಲಿನ ಬ್ಲೂ ಟಿಕ್ ತೆಗೆದು ಹಾಕಿತ್ತು. ಟ್ವೀಟರ್ ವಿರುದ್ಧ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದರು.

ಅಪ್ಪು ಅಭಿಮಾನಿಗಳ ಹೋರಾಟಕ್ಕೆ ಮಣಿದ ಟ್ವೀಟರ್ ಮರಳಿ ಬ್ಲೂ ಟಿಕ್ ನೀಡಿದೆ. ಇದರಿಂದಾಗಿ ಅಭಿಮಾನಿಗಳಿಗೆ ಖುಷಿಯಾಗಿದೆ. ನಟ ಪುನೀತ್ ರಾಜಕುಮಾರ್ ಬರೀ ಚಿತ್ರಗಳಿಂದಲ್ಲ ಅವರ ವ್ಯಕ್ತಿತ್ವ, ಯಾರಿಗೂ ತಿಳಿಯದೆ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳಿಂದ ದೇಶ ಮಾತ್ರವಲ್ಲ ವಿಶ್ವದಲ್ಲಿ ಹೆಸರು ಮಾಡಿದವರು.




Leave a Reply

Your email address will not be published. Required fields are marked *

error: Content is protected !!