ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ವಾಷಿಂಗ್ಟನ್: ಈಗಾಗ್ಲೇ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತೆಎಣಿಕೆ ಪ್ರಕ್ರಿಯೆ ಶುರುವಾಗಿದೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬಿಡೆನ್ ಮುನ್ನಡೆ ಸಾಧಿಸುವ ಮೂಲಕ, ರಿಪಬ್ಲಿಕ್ ಅಭ್ಯರ್ಥಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದಿಕ್ಕಿದ್ದಾರೆ.
ಇದೀಗ ಜೋ ಬಿಡೆನ್ ಅವರ ಫಲಿತಾಂಶ ಹೊರ ಬಿದ್ದು, ಬರೋಬ್ಬರಿ 70.7 ಮಿಲಿಯನ್ ವೋಟ್ ಪಡೆದಿದ್ದಾರೆ. ಇದು ಅಮೆರಿಕ ಇತಿಹಾಸದಲ್ಲಿಯೇ ಅತೀ ಹೆಚ್ಚು ಮತ ಪಡೆದ ಅಭ್ಯರ್ಥಿಯಾಗಿದ್ದಾರೆ. 2008ರಲ್ಲಿ ಒಬಾಮಾ 69 ಮಿಲಿಯನ್ ವೋಟ್ಸ್ ಪಡೆದಿದ್ರು.
ಇನ್ನು ಟ್ರಂಪ್ ಗಿಂತ 2.7 ಮಿಲಿಯನ್ ಮತಗಳ ಮುಂದಿದ್ದು, ಶೇಕಡ 64ರಷ್ಟು ಮತ ಎಣಿಕೆ ನಡೆದಿದೆ ಎಂದು ತಿಳಿದು ಬಂದಿದೆ.