ಅಮೇರಿಕಾ ಮತ್ತು ಕರಾಳ ಮೇ25

591

ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂದಿಗೂ ಜನಾಂಗೀಯ ದಾಳಿ, ಹತ್ಯೆ ನಡೆಯುತ್ತಿರುವುದು ಜಾತಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಡಿಜಿ ಐಜಿಪಿ ಕಚೇರಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ಎಸ್.ಎಲ್ ಶ್ರೀಧರಮೂರ್ತಿ ಅವರು ಬರೆದ ಲೇಖನ ಇಲ್ಲಿದೆ.

ಏನಾಗಿದೆ ಅಮೇರಿಕಾ ಪೊಲೀಸ್ ವ್ಯವಸ್ಥೆಗೆ ಸಾವಿರಾರು ಜನರು ಅಮೇರಿಕಾದಲ್ಲಿ ಅನೇಕ ಪ್ರದೇಶಗಳಲ್ಲಿ ಟ್ರಂಪ್ ಸರ್ಕಾರದ ವಿರುದ್ಧ ಜನ ದಂಗೇಳಿರುವುದು ಆಶ್ಚರ್ಯವೇನಲ್ಲ. ಮೇ, 25 ಅಮೇರಿಕಾದಲ್ಲಿ ಕರಾಳ ದಿನವಾಗಿತ್ತು. ಅಂದು ಕಪ್ಪು ಜಾತಿಯವನಾದ 46 ವರ್ಷದ ಫ್ಲಾಯಿಡ್ ನ ಕತ್ತಿನ ಮೇಲೆ ಬಿಳಿ ಪೊಲೀಸ್ ಮನುಷ್ಯ ತನ್ನ ಮೊಣಕಾಲಿನಿಂದ ಬಲವಾಗಿ ಅದಿಮಿಟ್ಟು ಸಾಯುವವರೆಗೆ ಬಿಡಲಿಲ್ಲ. ತನಗೆ ಉಸಿರಾಡುವುದಿಲ್ಲ ‘ಐಕಾಂಟ್ ಬ್ರೀತ್’ ಎಂದು ಕಷ್ಟಪಟ್ಟು ಹೇಳುತ್ತಿದ್ದರೂ ಕರಗದ ಮನಸ್ಸಿನ ಕಟುಕನಾಗಿದ್ದ ಆ ಪೊಲೀಸ್. ಪೊಲೀಸ್ ನ ಒಂದೇ ಒಂದು ಆದೇಶವಿತ್ತು ಫ್ಲಾಯಿಡ್ ನನ್ನ ಪೊಲೀಸ್ ವ್ಯಾನ್ಗೆ ಏರಿಸುವುದು. ಅವನು ಕೊನೆ ಹಂತದಲ್ಲಿಯೂ ಫ್ಲಾಯಿಡ್ ನನ್ನ ಬಿಡಲಿಲ್ಲ. ಇನ್ನೂ ಆಶ್ಚರ್ಯವೆಂದರೆ ಈ ಪೊಲೀಸ್ ಮಾಡುವ ಕೃತ್ಯವನ್ನು ವೀಡಿಯೋ ತೆಗೆದರೇ ಹೊರತು ಯಾರೂ ಪ್ರಾಣದ ಬಗ್ಗೆ ಗಮನಿಸಲಿಲ್ಲ. ಜನರು ಸುತ್ತಲೂ ಇದ್ದರೂ ಯಾರೊಬ್ಬರು ಈ ಪೊಲೀಸರನ್ನು  ತಡೆಹಿಡಿದು ಫ್ಲಾಯಿಡ್ ನನ್ನು ರಕ್ಷಿಸಲು ಮುಂದಾಗಲಿಲ್ಲ. ಅಲ್ಲಿ ಕರ್ತವ್ಯನಿರತ ಪೊಲೀಸ್  ಸಹ ಈ ದೃಶ್ಯವನ್ನು ಮೂಕವಿಸ್ಮಿತನಾಗಿ ನೋಡುತ್ತಿದ್ದನೇ ಹೊರತು, ತಡೆದು ಹೋಗಲಿ ಬಿಡು ಎನ್ನಲಿಲ್ಲ. ಹಾಗಾಗಿದ್ದರೆ ಅವನು ಬದುಕುಳಿಯುತ್ತಿದ್ದ. ಈಗ ಇಡೀ ದೇಶದಲ್ಲೆಡೆ ಜನ ಧಂಗೆದ್ದಿದ್ದಾರೆ. ಫ್ಲಾಯಿಡ್ ಸಾವಿನ ವಿರುದ್ಧ ಪೊಲೀಸ್ ವ್ಯವಸ್ಥೆಯ ವಿರುದ್ಧ ನ್ಯಾಯ ಕೇಳುತ್ತಿದ್ದಾರೆ. ಸುಮಾರು 5 ಸಾವಿರಕ್ಕೂ ಮಿಗಿಲಾಗಿ ಜನರು ಅರೆಸ್ಟಾಗಿದ್ದಾರೆ. 5 ಜನ ಪ್ರಾಣ ಕಳೆದುಕೊಂಡಿದ್ದಾರೆಂದರೆ ಜನರ ಆಕ್ರೋಶ ಯಾವ ಮಟ್ಟದ್ದೆಂದು ತಿಳಿಯಬಹುದು.

ಬೋಸ್ಟನ್ ನಲ್ಲಿ ಪೊಲೀಸ್ ವಾಹನಗಳನ್ನು ಜನರು ಸುಟ್ಟಿದ್ದಾರೆ. ಮಿನ್ನೆಸೋಟ್ ಫಿಳಿಡೆಲ್ಫಿಯಾದಲ್ಲಿ ಜನ ಆಕ್ರೋಶ ಭರಿತರಾಗಿ ರಸ್ತೆ ಬಂದ್ ಮಾಡಿ, ಗಲಭೆ ಸೃಷ್ಟಿಸಿ ತಮ್ಮ ಸಿಟ್ಟು ಹೊರಹಾಕಿದ್ದಾರೆ. ಫಿಲಿಡೆಲ್ಫಿಯಾದಲ್ಲಿ ದಂಗೆದ್ದ ಜನ ಅಂಗಡಿ ಮುಂಗಟ್ಟುಗಳಲ್ಲಿ ನುಗ್ಗಿ ಕೈಗೆಟುಗಿದ್ದನ್ನು ದೋಚಿಕೊಳ್ಳುತ್ತಿದ್ದಾಗ ಪೊಲೀಸರು ತಡೆಯಲು ಯತ್ನಿಸುತ್ತಿದ್ದ ದೃಶ್ಯಗಳು ಗಾಭರಿ ಹುಟ್ಟಿಸುತ್ತಿದ್ದವು. ಹಲವು ಪ್ರದೇಶಗಳಲ್ಲಿ ಕಟ್ಟಡಗಳಿಗೆ ಬೆಂಕಿ ಇಡುವುದು ಸಹ ಆಗಿತ್ತು. ಇದೆಲ್ಲಾ ಬೇಕಾಗಿರಲಿಲ್ಲ. ಈಗಿನ ಕೊರೋನಾ ವಿಪತ್ಕರ ಪರಿಸ್ಥಿತಿಯಲ್ಲಿ ಈ ಅಮೇರಿಕಾಕ್ಕೆ ಕೊರೋನಾ ನಷ್ಟದ ಜೊತೆಗೆ, ಈಗ ಸಂಭವಿಸಿದ ನಷ್ಟವನ್ನು ಸೇರಿಸಿದರೆ ಅಮೇರಿಕಾ ಸುಖಾಸುಮ್ಮನೆ ಕಷ್ಟಗಳ ಸರಮಾಲೆಯನ್ನು ಎಳೆದುಕೊಂಡಂತಾಗಿದೆ.

ಏನೇ ಆಗಲಿ ಈ ಘಟನೆ ಖಂಡನೀಯ. ಕಪ್ಪು ಜಾತಿಯ ವ್ಯಕ್ತಿಗೆ ಆಗುತ್ತಿರುವ ಶೋಷಣೆಯು ಈಗಿನದಲ್ಲ. 1968ರಲ್ಲಿ ಮಾನವ ಹಕ್ಕುಗಳ ಹೋರಾಟದ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹತ್ಯೆಯ ನಂತರ 53 ವರ್ಷಗಳೇ ಕಳೆದರೂ ಈ ಬಣ್ಣ ಜಾತಿ ವೈಷಮ್ಯ ಇನ್ನೂ ಸಾಯದೇ ಉಳಿದುಕೊಂಡಿರುವುದು ದುರಾದೃಷ್ಟದ ಸಂಗತಿಯಾಗಿದೆ. ಎಲ್ಲಿ ಅನ್ಯಾಯವಾಗಿದ್ದರೂ ಅಲ್ಲೆಲ್ಲಾ ‘ನ್ಯಾಯಕ್ಕೆ’-ಅನ್ಯಾಯವೇ ಸಿಗುತ್ತಿದೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಆಗಿರುವ ಅನ್ಯಾಯದ ಬಗ್ಗೆ ಸಿಡಿದೆದ್ದು ಹೇಳಿದ್ದರು. ಕಪ್ಪು ಜಾತಿಯ ಒಬಾಮಾ ಅಮೇರಿಕಾ ಅಧ್ಯಕ್ಷನಾದರೂ ಕಪ್ಪು ಜನಾಂಗಕ್ಕೆ ಸಾವುನೋವು ಅಮೇರಿಕಾದಲ್ಲಿ ತಪ್ಪಲಿಲ್ಲ.

ಅಮೇರಿಕಾದ್ಯಂತಾ ಕಪ್ಪು ಆಫ್ರಿಕನ್ನರಿಗೆ ಬಿಳಿ ಅಮೇರಿಕನ್ನರು ಎದುರಾದಾಗ ಅಮೇರಿಕನ್ನರ ಶೋಷಣೆಗೆ ಆಫ್ರಿಕನ್ನರು ಅವಹೇಳನಕ್ಕೆ ಒಳಗಾಗುವುದು ಅಥವಾ ಪ್ರಾಣ ತ್ಯಜಿಸುವುದು ಯಾವುದೋ ಮೂಲೆಯಲ್ಲಿ ಯಾವುದೋ ನೆಪದಲ್ಲಿ ಆಗುತ್ತಲೇ ಇದೆ. ಇಷ್ಟಾಗಿಯೂ ಅಧ್ಯಕ್ಷ ಟ್ರಂಪ್ ಈ ಪರಿಸ್ಥಿತಿಯನ್ನು ಚಾಕಚಕ್ಯತೆಯಿಂದ ನಿಭಾಯಿಸುವುದು ಬಿಟ್ಟು, ಸೈನ್ಯವನ್ನು ಜನರ ಮೇಲೆ ಬಳಸುತ್ತೇನೆ ಎಂದು ಹೇಳಿರುವುದು ಖಂಡನೀಯ.

ಇನ್ನೆಷ್ಟು ದಿನ ಈ ಶೋಷಣೆ ದೊಡ್ಡಣ್ಣನ ನಿರಂಕುಶಕ್ಕೆ ತಡೆಯೇ ಇಲ್ಲವೇ? ಐಕ್ಯ ರಾಜ್ಯ ಸಮಿತಿ ಏನು ಮಾಡುತ್ತಿದೆ. ತಾನು ಅಧಿಕಾರಕ್ಕೆ ಬಂದರೆ ನೂರು ದಿನಗಳಲ್ಲೇ ಈ ದುರುವ್ಯವಸ್ಥೆಯನ್ನೇ ಸರಿಪಡಿಸಿ, ಸಮಸ್ಯೆ ಪರಿಷ್ಕರಿಸಲು ಪ್ರಯತ್ನಿಸುತ್ತೇನೆಂದು ಜೋ ಬಿಡೆನ್ ಹೇಳಿಕೆ ನೀಡಿದ್ದಾರೆ. ‘ರೇಸಿಜಂ’ ಈ ರಾಜಕೀಯಗಳಿಗೆ ಕಚ್ಚಾವಸ್ತುವಾದರೆ ಅಮೇರಿಕಾವನ್ನು ಕೊರೊನಾ ಜೊತೆ, ಈ ಆಪತ್ಕಾಲದಿಂದ ಹೊರಬಂದು, ಅಭಿವೃದ್ಧಿಯಾಗೋದು ಯಾವಾಗ?

ಲೇಖಕರು: ಎಸ್.ಎಲ್ ಶ್ರೀಧರಮೂರ್ತಿ

TAG


Leave a Reply

Your email address will not be published. Required fields are marked *

error: Content is protected !!