257 ಜನರಲ್ಲಿ ಸೋಂಕು.. 4 ಸಾವು

376

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, ಇಂದು 257 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 4,320 ಆಗಿದೆ. ಇವತ್ತಿನ ಪ್ರಕರಣಗಳಲ್ಲಿ 155 ಕೇಸ್ ಹೊರರಾಜ್ಯ ಹಾಗೂ 1 ವಿದೇಶ ಸಂಪರ್ಕ ಹೊಂದಿದೆ.

ಇನ್ನು 106 ಜನ ಇಂದು ಗುಣಮುಖರಾಗಿ ಬಿಡುಗಡೆಯಾಗುವ ಮೂಲಕ ಇದುವರೆಗೂ 1,610 ಜನ ಡಿಸ್ಚಾರ್ಜ್ ಆಗಿದ್ದಾರೆ. ಅಲ್ದೇ, ಇಂದು 4 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 2, ಗದಗ 1 ಹಾಗೂ ದಾವಣಗೆರೆಯಲ್ಲಿ ಒಬ್ಬರು ಸಾವಿನೊಂದಿಗೆ 57ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಸೋಂಕಿತರ ಅಂಕಿಸಂಖ್ಯೆ ಇಲ್ಲಿದೆ..

ಉಡುಪಿ 92, ರಾಯಚೂರು 88, ಹಾಸನ 15, ಮಂಡ್ಯ, ದಾವಣಗೆರೆ 13, ಬೆಳಗಾವಿ 12, ಬೆಂಗಳೂರು 9, ದಕ್ಷಿಣ ಕನ್ನಡ 4, ಗದಗ 2, ಚಿಕ್ಕಬಳ್ಳಾಪುರ 2, ಹಾವೇರಿ 1, ತುಮಕೂರು 1, ವಿಜಯಪುರ 1, ಮೈಸೂರು 1 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 257 ಆಗಿದೆ.




Leave a Reply

Your email address will not be published. Required fields are marked *

error: Content is protected !!