ಕಿರುತೆರೆಯಿಂದ ಅನಿರುದ್ಧ್ 2 ವರ್ಷ ಹೊರಗೆ

229

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ನಟ ಅನಿರುದ್ಧ್ ಅವರನ್ನು 2 ವರ್ಷಗಳ ಕಾಲ ಕಿರುತೆರೆಯಿಂದ ಹೊರಗೆ ಇಡಲಾಗಿದೆ ಎಂದು, ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.

ನಟ ಅನಿರುದ್ಧ್ ಅವರನ್ನು ಬ್ಯಾನ್ ಮಾಡಲಾಗಿದೆ ಅನ್ನೋ ಸುದ್ದಿ ಹರಿದಾಡುತಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಭಾಸ್ಕರ್ ಅವರು, ಬ್ಯಾನ್ ಮಾಡಿಲ್ಲ. 2 ವರ್ಷಗಳ ಕಾಲ ಕಿರುತೆರೆಯಿಂದ ದೂರ ಇಟ್ಟಿದ್ದೇವೆ ಎಂದಿದ್ದಾರೆ.

ಜೊತೆ ಜೊತೆಯಲಿ ಧಾರವಾಹಿ ತಂಡದೊಂದಿಗೆ ನಟ ಅನಿರುದ್ಧ್ ಸಾಕಷ್ಟು ಕಿರಿಕ್ ಮಾಡಿಕೊಳ್ಳುತ್ತಿದ್ದರಂತೆ. ಈ ಹಿಂದೆ ಹಲವು ಬಾರಿ ಕಿರಿಕ್ ಮಾಡಿಕೊಂಡು ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದು, ಸಮಾಧಾನ ಪಡಿಸಿ ಮರಳಿ ಕರೆದುಕೊಂಡು ಬರಲಾಗಿದೆ. ಆದರೆ, ಈ ಬಾರಿ ಹಾಗೇ ಆಗಿಲ್ಲ. ಸ್ಕ್ರಿಪ್ಟ್ ವಿಚಾರಕ್ಕೆ ನಿರ್ದೇಶಕ ಮಧು ಅವರಿಗೆ ಮೂರ್ಖ ಎಂದು ಬೈದಿದ್ದಾರಂತೆ. ಜಗಳವಾಡಿದ್ದಾರೆ. ಇದೆ ವಿಚಾರಕ್ಕೆ ಧಾರವಾಹಿಯ ನಿರ್ಮಾಪಕರು, ನಿರ್ಮಾಪಕರ ಸಂಘದೊಂದಿಗೆ ಸಭೆ ನಡೆಸಿದಿದ್ದಾರೆ. ಇದರ ಪರಿಣಾಮ 2 ವರ್ಷ ಸ್ಮಾಲ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!