2 ಹೆಂಡ್ತಿಯರಿಗೆ ಬೈ.. 22 ವರ್ಷ ಚಿಕ್ಕ ಹುಡ್ಗಿಗೆ ನಿರ್ದೇಶಕ ಹಾಯ್..

436

ಬಾಲಿವುಡ್ ಅಂಗಳದಲ್ಲಿ ಎರಡ್ಮೂರು ಮದುವೆ, ಡಿವೋರ್ಸ್ ಅನ್ನೋದು ಕಾಮನ್ ಆಗಿದೆ. ಅದರ ಜೊತೆಗೆ ಅಜಗಜಾಂತರ ವಯಸ್ಸಿನ ಅಂತರವಿಟ್ಟುಕೊಂಡು ಮದ್ವೆಯಾಗೋದು ಹೊಸದಾಗಿಲ್ಲ. ಆ ಸಾಲಿಗೆ ಇದೀಗ ನಿರ್ದೇಶಕ ಅನುರಾಗ ಕಶ್ಯಪ ಸೇರಿದ್ದಾರೆ.

ಎರಡು ಮದುವೆ ಮಾಡಿಕೊಂಡಿದ್ದ ಅನುರಾಗ ಕಶ್ಯಪ, ಅವರೊಂದಿಗೆ ತಮ್ಮ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಆದ್ರೆ, ಇನ್ನೊಂದು ಹುಡ್ಗಿಯ ಜೊತೆಗಿನ ಸಂಗವನ್ನ ಅವರೆ ಇದೀಗ ಬಹಿರಂಗಗೊಳಿಸಿದ್ದಾರೆ. ಅದು ಬರೋಬ್ಬರಿ 22 ವರ್ಷ ಚಿಕ್ಕ ವಯಸ್ಸಿನ ಹುಡ್ಗಿಯ ಜೊತೆಗೆ.

ಶುಭ್ರಾ ಶೆಟ್ಟಿ ಅನ್ನೋ ಹುಡ್ಗಿಗೆ 25 ವರ್ಷ, ಅನುರಾಗಗೆ 47 ವರ್ಷ. ಇವರಿಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಅನ್ನೋದು ಬಹಳ ದಿನಗಳ ಹಿಂದೆಯೇ ಕೇಳಿ ಬಂದಿತ್ತು. ಇದೀಗ ಸ್ವತಃ ಅನುರಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮಿಬ್ಬರ ಫೋಟೋ ಹಾಕಿ ಅದನ್ನ ಬಹಿರಂಗಗೊಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!