ಶೀಘ್ರದಲ್ಲಿ ಕಲಬುರಗಿಯಲ್ಲಿ ಉಕ್ಕಿನ ಹಕ್ಕಿಗಳ ಹಾರಾಟ

748

ಕಲಬುರಗಿ: ನಗರದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ನಿಲ್ದಾಣದ ಒಳಗೆ ಸಕಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.

ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ರಾಜ್ಯ ಸರ್ಕಾರದೊಂದಿಗೆ ಜ್ಞಾಪಕ ಪತ್ರದ(ಎಂಒಯು) ಕುರಿತಾಗಿ ಚರ್ಚೆ ನಡೆಸಲಾಗಿದೆ.  ಉಡೆ ದೇಶ್ ಕಾ ಆಮ್ ನಾಗರಿಕ್(ಯುಡಿಎಎನ್) ಸಂಸ್ಥೆಯು ಮೂರು ಮಾರ್ಗಗಳನ್ನ ಗುರುತಿಸಿದೆ.

ಕಲಬುರಗಿ-ಬೆಂಗಳೂರು, ಕಲಬುರಗಿ-ತಿರುಪತಿ ಹಾಗೂ ಕಲಬುರಗಿ-ಹಿಂಡನ್(ದೆಹಲಿ ಸಮೀಪ) ನಡುವೆ ಸಂಚಾರಕ್ಕೆ ಪ್ಲಾನ್ ಮಾಡಲಾಗಿದೆ. ಆದಷ್ಟು ಬೇಗ ಕಲಬುರಗಿ ವಿಮಾನ ನಿಲ್ದಾಣದಿಂದ ಉಕ್ಕಿನ ಹಕ್ಕಿಗಳು ಹಾರಾಟ ನಡೆಸಲಿವೆ. ಈ ಮೂಲಕ ಈ ಭಾಗದ ಬಹುದಿನಗಳ ಕನಸು ನನಸಾಗಲಿದೆ.




Leave a Reply

Your email address will not be published. Required fields are marked *

error: Content is protected !!