ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಪ್ರಸ್ತಾವ ಮಂಡಿಸಿದ ಶಾ

365

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370, 353 ಕಲಂನ್ನ ರದ್ದು ನಿಲುವಳಿಯನ್ನ ಕೇಂದ್ರ ಗೃಹಸಚಿವ ಅಮಿತ ಮಂಡಿಸಿದ್ದಾರೆ. ರಾಜ್ಯಸಭೆ ಕಲಾಪದಲ್ಲಿ ತೀವ್ರ ಗದ್ದಲ ಗಲಾಟೆಯ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ ಶಾ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ ಕಲಂ 370 ಹಾಗೂ 35ಎ ಅನ್ನು ರದ್ದುಗೊಳಿಸುವ ತಿದ್ದುಪಡಿ ವಿದೇಕವನ್ನ ಮಂಡಿಸಿದ್ರು.

ರಾಷ್ಟ್ರಪತಿಗಳ ಸಂವಿಧಾನ ತಿದ್ದುಪಡಿ ಅಧಿಸೂಚನೆಗೆ ಸಂಬಂಧಿಸಿದ ಮಾಹಿತಿ ಪತ್ರವನ್ನ ಕಾನೂನು ಸಚಿವಾಲಯ ಬಿಡುಗಡೆ ಮಾಡಿದೆ. ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 1954ರಲ್ಲಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನ ತಿದ್ದುಪಡಿ ವ್ಯಾಪ್ತಿಗೆ ತರುವ ಬಗ್ಗೆ ರಾಷ್ಟ್ರಪತಿಗಳ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಸಂವಿಧಾನದಲ್ಲಿರುವ ವಿಧಿಗಳು ಕಾಲಕ್ಕೆ ತಕ್ಕಂತೆ ತಿದ್ದುಪಡಿಗೆ ಒಳಗಾಗುತ್ತವೆ. ಅದರಂತೆ 370 ಮತ್ತು 367ನೇ ವಿಧಿ ಒಳಗೊಳ್ಳಬೇಕೆಂದು ರಾಷ್ಟ್ರಪತಿಗಳ ಅಧಿಸೂಚನೆಯಲ್ಲಿ ಹೇಳಲಾಗಿದೆ.

ಕೇಂದ್ರಾಡಳಿತಕ್ಕೆ ಪ್ರಸ್ತಾವ

ಲಡಾಖ್ ಅನ್ನು ವಿಧಾನಸಭೆಯಿಲ್ಲದ ಕೇಂದ್ರಾಡಳಿತ ಪ್ರದೇಶವಾಗಿ, ಜಮ್ಮು ಮತ್ತು ಕಾಶ್ಮೀರವನ್ನ ವಿಧನಸಭೆ ಸಹಿತವಾಗಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವ ಬಗ್ಗೆಯೂ ಅಮಿತ ಶಾ ಅನುಮೋದನೆ ಮಂಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡ ಗುಲಾಂ ನಬಿ ಆಜಾದ್ ಸೇರಿದಂತೆ ವಿರೋಧ ಪಕ್ಷಗಳ ವಿರೋಧದ ನಡುವೆಯೂ ಅಮಿತ ಶಾ ಅನುಮೋದನೆ ಮಂಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!