ವಿಧಿ 370 ರದ್ದು: 222 ಬಾರಿ ಪಾಕ್ ಕದನ ವಿರಾಮ ಉಲ್ಲಂಘನೆ

400

ಜಮ್ಮು-ಕಾಶ್ಮೀರ: ಕಣಿವೆ ನಾಡಿಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಪಾಕಿಸ್ತಾನ ಬರೋಬ್ಬರಿ 222 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಆಗಸ್ಟ್ 5ರಿಂದ ಪಾಕಿಸ್ತಾನ ಗಡಿಯಲ್ಲಿ ಸತತವಾಗಿ ಕದನ ವಿರಾಮ ಉಲ್ಲಂಘನೆ ಮಾಡಿಕೊಂಡು ಬಂದಿದೆ. ಈ ಮೂಲಕ ಒಂದೇ ವರ್ಷದಲ್ಲಿ 1,900 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದಂತಾಗಿದೆ.

ಕಾಶ್ಮೀರದ ವಿಷಯವನ್ನ ವಿಶ್ವಮಟ್ಟದಲ್ಲಿ ಚರ್ಚಿಸಲು ಹೆಣಗಾಡ್ತಿರುವ ಪಾಕ್, ಒಂದು ಕಡೆ ಕದನ ವಿರಾಮ ಉಲ್ಲಂಘನೆ ಮಾಡ್ತಿದೆ. ಮತ್ತೊಂದು ಕಡೆ ಉಗ್ರರನ್ನು ಭಾರತದೊಳಗೆ ನುಸುಳಿಸಲು ಸಹಾಯ ಮಾಡ್ತಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಹೇಳಲಾಗಿದೆ.




Leave a Reply

Your email address will not be published. Required fields are marked *

error: Content is protected !!