ಕನ್ನಡತಿ ಹರಿಪ್ರಿಯಾ ಪತ್ರ..ಆ ನಟಿಗೆ ಪರೋಕ್ಷ ತಿರುಗೇಟಾ?

433

ನಟಿ ಹರಿಪ್ರಿಯಾ ಬರೀ ಕನ್ನಡದಲ್ಲಿ ಮಾತ್ರ ನಟಿಸಿಲ್ಲ. ದಕ್ಷಿಣ ಭಾರತದ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕನ್ನಡತಿ, ಬಹುಭಾಷಾ ಸ್ಟಾರ್ ನಟಿ. ಅವರು ಇದೀಗ ವಿದೇಶ ಪ್ರವಾಸದಲ್ಲಿದ್ದಾರೆ. ಹೀಗಿರುವಾಗ್ಲೇ ಕನ್ನಡದಲ್ಲಿ ಪತ್ರವೊಂದನ್ನ ಬರೆಯುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ.

ನನಗೆ ಕನ್ನಡ ಮಾತನಾಡಲು, ಓದಲು, ಬರೆಯಲು ಚೆನ್ನಾಗಿ ಬರುತ್ತೆ ಅಂತಾ ಹೇಳಿರುವ ನಟಿ ಹರಿಪ್ರಿಯಾ, ಅಷ್ಟೇ ಚೆಂದವಾಗಿ ಬರೆದಿದ್ದಾರೆ. ಚಿತ್ರರಂಗದ ಹಿನ್ನೆಲೆಯಿಲ್ಲದೆ ಬಂದವಳನ್ನ ನೀವು ನನ್ನನ್ನ, ನನ್ನ ಕೆಲಸಗಳನ್ನ ಇಷ್ಟಪಟ್ಟು ಅಭಿಮಾನಿಸಿದ್ದೀರಿ. ನನ್ನ ಗೆಲುವಿನ ಪ್ರತಿ ಹೆಜ್ಜೆಯಲ್ಲಿ ನಿಮ್ಮ ಪಾಲು ದೊಡ್ಡದು ಅಂತಾ ಹೇಳಿದ್ದಾರೆ.

ನಟಿ ಹರಿಪ್ರಿಯಾರ ಈ ಬರಹ ನಿನ್ನೆ ಮೊನ್ನೆ ಸಿನಿ ಜಗತ್ತಿನಲ್ಲಿ ಕಣ್ಣು ಬಿಡ್ತಿರುವ ನಟಿಯೊಬ್ಬಳಿಗೆ ಸರಿಯಾಗಿಯೇ ತಿರುಗೇಟು ಕೊಟ್ಟಂತಿದೆ. ಸಕ್ಸಸ್ ನ ಪಿತ್ತ ನೆತ್ತಿಗೇರಿದ್ಮೇಲೆ ಕೆಲವರು ಹೇಗಾಡ್ತಾರೆ ಅನ್ನೋದಕ್ಕೆ ಆ ನಟಿಯ ಪದೆಪದೆ ವಿವಾದಗಳು ಸಾಬೀತು ಮಾಡಿವೆ. ಹರಿಪ್ರಿಯಾಳ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು ಈ ವಿಚಾರ ಸಹ ಪ್ರಸ್ತಾಪ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!