ವಿದ್ಯಾಕಾಶಿಯಲ್ಲಿ ಆರ್.ಟಿ.ಇ ಶಾಲೆಗಳ ಸಮಸ್ಯೆ ಏನು?

472

ವಿದ್ಯಾಕಾಶಿ ಧಾರವಾಡದಲ್ಲಿ ಆರ್.ಟಿ.ಇ ಸಮಸ್ಯೆ ಕುರಿತು ಪೋಷಕರಾದ ಶ್ರೀಕಾಂತ ಹುಟಗಿ ಎಂಬುವರು ತಮ್ಮ ನೋವು ತೋಡಿಕೊಂಡಿದ್ದಾರೆ…

ಶಿಕ್ಷಣ ಮಂತ್ರಿಗಳು ಹೊಸ ಶಿಕ್ಷಣ ನೀತಿಯನ್ನು ಪೂರ್ವ ಪ್ರಾಥಮಿಕ ಹಂತ ಮೊದಲ 5 ವರ್ಷ ಶಾಲೆಗಳಲ್ಲಿ 2021-22ನೇ ಸಾಲಿನಲ್ಲಿ ಅನ್ವಯ ಮಾಡುವ ಕುರಿತು ಪತ್ರಿಕೆಗಳಲ್ಲಿ ತಿಳಿಸಿರುತ್ತಾರೆ.  ಆರ್.ಟಿ.ಇ ಅಡಿಯಲ್ಲಿ ಅರ್ಜಿ ಕರೆಯಲಾಗಿದೆ. ಆದರೆ, ಧಾರವಾಡದಲ್ಲಿ ಮೊದಲ ಹಂತದ ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಶಾಲೆಗಳು ಇಲ್ಲವೇ ಇಲ್ಲ.

ಪೂರ್ವ ಪ್ರಾಥಮಿಕ ಹಂತದಲ್ಲಿ ಆರ್.ಟಿ.ಇ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ವಿದ್ಯಾಕಾಶಿ ಎಂದೇ ಹೆಸರಾಗಿರುವ ಧಾರವಾಡದಲ್ಲಿ ಒಂದೇ ಒಂದು ಶಾಲೆಯ ಹೆಸರು ಕೂಡ ಪಟ್ಟಿಯಲ್ಲಿ ಇಲ್ಲ. ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನವಾಗಿದೆ.

ಬಡವರು ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ  ಸಿಬಿಎಸ್ಸಿ ಶಿಕ್ಷಣ ನೀಡಬೇಕು ಎನ್ನುವ ಪಾಲಕರಿಗೆ ಅವಕಾಶವೇ ಇಲ್ಲ. ಆರ್.ಟಿ.ಇ ಎನ್ನುವುದು ಹೇಳಿಕೆಗೆ ಅಷ್ಟೇ ಅನ್ನುವ ರೀತಿಯಲ್ಲಿ ಆಗಿದೆ. ಅನೇಕ ಪಾಲಕರಿಗೆ ಮಕ್ಕಳ ಪ್ರತಿಭೆ ಅನ್ವಯ ಬೇಕಾದ ಶಾಲೆಗಳ ಆಯ್ಕೆಗೆ ಅವಕಾಶವೇ ಇಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!