ಯಶ್ ಕಲಾಲ್ ತಂಡ ಎಪಿಎಲ್ ಚಾಂಪಿಯನ್ಸ್

359

ಪ್ರಜಾಸ್ತ್ರ ಸುದ್ದಿ

ಅಳ್ನಾವರ: ಯಶ್ ಕಲಾಲ್ ಒಡೆತನದ ಆದರ್ಶ ಬಿಗ್ ಡ್ಯಾಡಿ ತಂಡ ಎಪಿಎಲ್(ಅಳ್ನಾವರ ಪ್ರೀಮಿಯರ್ ಲೀಗ್) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎದುರಾಳಿ ಖಾನ್ ಕ್ರಿಕೆಟ್ ಕ್ಲಬ್ ತಂಡವನ್ನು ಮಣಿಸುವುದರ ಮೂಲಕ ಆದರ್ಶ ಬಿಗ್ ಡ್ಯಾಡಿ ತಂಡ ಪ್ರಶಸ್ತಿಗೆ ಮುತ್ತಿಕ್ಕಿದೆ.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಯಶ್ ಕಲಾಲ್, ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಚಾಂಪಿಯನ್ಸ್ ತಂಡಕ್ಕೆ 55,555 ರೂಪಾಯಿ ನಗದು ಹಾಗೂ ಟ್ರೋಫಿ ನೀಡಲಾಯಿತು. ತಂಡಕ್ಕೆ ಕಡಬಗಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ದಾಸಗೀರಸಾಬ ಹುಣಸಿಕಟ್ಟಿ, ಪ.ಪಂ ಸದಸ್ಯ ರಾಜು ಯಲಕಪಾಟಿ, ತಮೀಮ್ ತೆರಗಾಂವ ಟ್ರೋಫಿ ನೀಡಿ ಗೌರವಿಸಿದರು.

ತಾಲೂಕಿನ ಕ್ರೀಡಾಂಗಣದಲ್ಲಿ ಕಳೆದ ಎಂಟು ದಿನಗಳಿಂದ ನಾಗರಾಜ ಛಬ್ಬಿ ಅಳ್ನಾವರ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತಿತ್ತು.




Leave a Reply

Your email address will not be published. Required fields are marked *

error: Content is protected !!