ಡಿಸಿಸಿ ಬ್ಯಾಂಕ್ ನ್ನೇ ದೋಚಿದ್ದ ಕಳ್ಳರು ಅಂದರ್

261

ಪ್ರಜಾಸ್ತ್ರ ಅಪರಾಧ ಸುದ್ದಿ

ಸವದತ್ತಿ: ತಾಲೂಕಿನ ಮುರುಗೋಡದಲ್ಲಿನ ಡಿಸಿಸಿ ಬ್ಯಾಂಕ್ ಗೆ ನುಗ್ಗಿದ ಕಳ್ಳರು ಕೋಟ್ಯಾಂತರ ರೂಪಾಯಿ, ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಅವರನ್ನು ಒಂದು ವಾರದೊಳೆ ಬಂಧಿಸಲಾಗಿದೆ. ಇದರಲ್ಲಿ ಬ್ಯಾಂಕ್ ಕ್ಲರ್ಕ್ ಶಾಮೀಲಾಗಿರುವುದೇ ದುರಂತ.

ಆರೋಪಿಗಳಾದ ಬ್ಯಾಂಕ್ ಕ್ಲರ್ಕ್ ಬಸವರಾಜ ಸಿದ್ದಲಿಂಗಪ್ಪ ಹುಣಶಿಕಟ್ಟಿ(30), ಸಂತೋಷ ಕಾಳಪ್ಪ ಕಂಭಾರ(31) ಹಾಗೂ ಗಿರೀಶ್ ಅಲಿಯಾಸ್ ಯಮನಪ್ಪ ಲಕ್ಷ್ಮಣ ಬೆಳವಲ(26) ಅನ್ನೋ ಮೂವರನ್ನು ಬಂಧಿಸಲಾಗಿದೆ.

ಘಟನೆ ನಡೆದಿದ್ದು ಯಾವಾಗ?

ಕಳೆದ ಮಾರ್ಚ್ 6ರಂದು ಡಿಸಿಸಿ ಬ್ಯಾಂಕ್ ಕಳ್ಳತನವಾಗಿದೆ ಎಂದು ಪೊಲೀಸರು ದೂರು ನೀಡಲಾಗುತ್ತೆ. ಬ್ಯಾಂಕಿನ ಸ್ಟ್ರಾಂಗ್ ರೂಮ್ ತೆಗೆದು ಬರೋಬ್ಬರಿ 4 ಕೋಟಿ 37 ಲಕ್ಷದ 59 ಸಾವಿರ ರೂಪಾಯಿ ಹಾಗೂ 1 ಕೋಟಿ, 63 ಲಕ್ಷದ 72 ಸಾವಿರದ 220 ರೂಪಾಯಿ ಮೌಲ್ಯದ 3 ಕೆಜಿ 148.504 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ಮ್ಯಾನೇಜರ್ ಪ್ರಮೋದ ಕೃಷ್ಣಪ್ಪ ಯಲಿಗಾರ ದೂರು ನೀಡಿರುತ್ತಾರೆ.

ಅಖಾಡಕ್ಕೆ ಇಳಿದ ಪೊಲೀಸ್ ಪಡೆ

ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಮರ್ಗಾದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಮಹಾನಿಂಗ ನಂದಗಾಂವಿ, ರಾಮದುರ್ಗ ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಮುರುಗೋಡ ಇನ್ಸ್ ಪೆಕ್ಟರ್ ಮೌನೇಶ್ವರ ಮಾಲಿಪಾಟೀಲ, ಬೈಲಹೊಂಗಲ ಇನ್ಸ್ ಪೆಕ್ಟರ್ ಯು.ಎಚ್ ಸಾತೇನಹಳ್ಳಿ, ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿರೇಶ ದೊಡಮನಿ ಸೇರಿದಂತೆ ಸವದತ್ತಿ, ರಾಮದುರ್ಗ, ಗಂಗಾವತಿ, ಮುರುಗೋಡ ಠಣೆ ಪಿಎಸ್ಐ ಸೇರಿದಂತೆ ಟೆಕ್ನಿಕಲ್ ಸೆಲ್, ಅಪರಾಧ ವಿಭಾಗದ ನುರಿತ ಸಿಬ್ಬಂದಿಯನ್ನೊಳಗೊಂಡ 4 ತಂಡಗಳನ್ನು ರಚನೆ ಮಾಡಿ ತನಿಖೆ ನಡೆಸಲಾಗುತ್ತೆ.

ಕಳ್ಳತನ ನಡೆದು ಒಂದು ವಾರದೊಳಗೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 4 ಕೋಟಿ, 20 ಲಕ್ಷ, 98 ಸಾವಿರದ 400 ರೂಪಾಯಿ, 1 ಕೋಟಿ 63 ಲಕ್ಷ, 72 ಸಾವಿರದ 220 ರೂಪಾಯಿ ಮೌಲ್ಯದ 3 ಕೆಜಿ 149.26 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ವಶಕ್ಕೆ ಪಡೆಯಲಾಗಿದೆ.




Leave a Reply

Your email address will not be published. Required fields are marked *

error: Content is protected !!