ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಏಷ್ಯ ಕಪ್

141

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕ್ರಿಕೆಟ್ ಪ್ರೇಮಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಏಷ್ಯ ಕಪ್ ಟೂರ್ನಿಗೆ ದಿನಾಂಕ ನಿಗದಿಯಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ತನಕ ಪಂದ್ಯಗಳು ನಡೆಯಲಿವೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ನೇಪಾಳ ತಂಡಗಳ ನಡುವೆ 13 ಏಕದಿನ ಪಂದ್ಯಗಳು ನಡೆಯಲಿವೆ. ಇಲ್ಲಿ ಎರಡು ಗುಂಪುಗಳು ಇರಲಿವೆ. ಸೂಪರ್ ಫೋರ್ ಹಂತದ ಟಾಪ್ ತಂಡಗಳು ಫೈನಲ್ ಪ್ರವೇಶಿಸಲಿವೆ. 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದಿದೆ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.

ಆರಂಭದಿಂದಲೂ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲು ಭಾರತ ನಿರಾಕರಿಸುತ್ತಾ ಬಂದಿದೆ. ಹೀಗಾಗಿ ಏಷ್ಯ ಕಪ್ ನಡೆಯುವುದು ಅನುಮಾನ ಮೂಡಿತ್ತು. ಪಾಕ್ ತನ್ನ ನೆಲದಲ್ಲಿ ಟೂರ್ನಿ ನಡೆಯಬೇಕು ಎಂದಿತ್ತು. ಭದ್ರತೆ ಕಾರಣಕ್ಕೆ ಭಾರತ ಭಾಗವಹಿಸಲ್ಲ ಎಂದಿತ್ತು. ಕೊನೆಯದಾಗಿ ಹೈಬ್ರಿಡ್ ಮಾದರಿಯ ಟೂರ್ನಿ ಪ್ರಸ್ತಾಪವನ್ನು ಪಾಕ್ ಮಾಡಿತು. ಹೀಗಾಗಿ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ ಪಾಕ್ ನೆಲದಲ್ಲಿ ಪಂದ್ಯಗಳನ್ನು ಆಡುವುದು ಅನುಮಾನವಿದೆ.




Leave a Reply

Your email address will not be published. Required fields are marked *

error: Content is protected !!