ಸೂಪರ್ 4ಗೆ ಭಾರತ ಎಂಟ್ರಿ

175

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಏಷ್ಯ ಕಪ್ 2023ರ ಟೂರ್ನಿಗೆ ಮಳೆರಾಯ ಒಂದಿಷ್ಟು ಸಮಸ್ಯೆ ಮಾಡುತ್ತಿದ್ದಾನೆ. ಹೀಗಾಗಿ ಪಂದ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆಲ್ಲುವ ತವಕದಲ್ಲಿತ್ತು. ಮಳೆಯಿಂದ ರದ್ದಾಯಿತು. ಸೋಮವಾರ ನೇಪಾಳದ ವಿರುದ್ಧದ ಪಂದ್ಯದಲ್ಲಿಯೂ ಮಳೆ ಕಾಣಿಸಿಕೊಂಡಿದೆ. ಹೀಗಾಗಿ ಡಕ್ ವರ್ತ್ ನಿಯಮದ ಪ್ರಕಾರ ಭಾರತ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಲೆಕ್ಕಾಚಾರವನ್ನು ಸ್ವಲ್ಪ ಹಿಂದೆ ಮುಂದೆ ಮಾಡಿದ ನೇಪಾಳ 48.2 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಆಸೀಫ್ ಶೇಖ್ 58, ಬೌಲರ್ ಸೋಮಪಾಲ್ ಕಮಿ 48, ಕೌಶಲ್ ಬ್ರುಟಲ್ 38 ರನ್ ಗಳು ಸೇರಿದಂತೆ ಇತರರು ಎರಡಂಕಿ ದಾಟಿದರು. ಭಾರತ ಪರ ಜಡೇಜಾ, ಸಿರಾಜ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಶಮಿ, ಠಾಕೂರ್, ಪಾಂಡ್ಯ ಒಂದೊಂದು ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಅಜೇಯ 74, ಶುಭನಂ ಗಿಲ್ ಅಜೇಯ 67 ರನ್ ಗಳಿಸಿದರು. 20.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 147 ರನ್ ಗಳಿಸಿದ್ದರು. ಮಳೆ ನಿರಂತರವಾಗಿ ಕಾಣಿಸಿಕೊಂಡ ಪರಿಣಾಮ ಡಕ್ವರ್ತ್ ನಿಯಮದ ಪ್ರಕಾರ ಭಾರತಕ್ಕೆ ಗೆಲುವು ಒಲಿಯಿತು. ಇದರೊಂದಿಗೆ ಸೂಪರ್ 4ಗೆ ಪ್ರವೇಶ ಪಡೆಯಿತು.




Leave a Reply

Your email address will not be published. Required fields are marked *

error: Content is protected !!