ಸುದೀಪ ಬಾಸ್ ಯಾರು? ಧೋನಿ ಬಗ್ಗೆ ಕಿಚ್ಚ ಹೇಳಿದ್ದೇನು?

417

ನಟ ಸುದೀಪ ಅಭಿನಯದ ಪೈಲ್ವಾನ್ ಮೂವಿಗೆ ಇನ್ನೊಂದು ದಿನ ಬಾಕಿ ಉಳಿದಿದೆ. ಈಗಾಗ್ಲೇ ಅಭಿಮಾನಿಗಳು ಟಿಕೆಟ್ ಬುಕ್ಕಿಂಗ್ ಮಾಡಿಸ್ತಿದ್ದಾರೆ. ಇದರ ನಡುವೆ AskPailwan ಅನ್ನೋ ಅಭಿಯಾನವನ್ನ ಸುದೀಪ ಶುರು ಮಾಡಿದ್ರು. ಅದಕ್ಕೆ ಅವರ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನ ಕೇಳಿದ್ದಾರೆ.

ನಿಮ್ಮ ಬಾಸ್ ಯಾರು?

‘ನನಗೆ ಬಾಸ್ ಇಲ್ಲ. ಬಾಸ್ ರೂಪದಲ್ಲಿ ನನ್ನ ತಂದೆ ಇದ್ದಾರೆ’ ಎಂದು ನಟ ಸುದೀಪ ಹೇಳಿದ್ದಾರೆ.

ರಾಜಕುಮಾರ ಬಗ್ಗೆ ಒಂದು ಮಾತು ಅಂತಾ ಕೇಳಿದಕ್ಕೆ ‘ನಿಜವಾದ ದಂತಕಥೆ’ ಎಂದು ಕಿಚ್ಚ ಉತ್ತರಿಸಿದ್ದಾರೆ.

ಧೋನಿ ಬಗ್ಗೆ ಏನಾದರೂ ಹೇಳಿ ಅಂತಾ ಕೇಳಿದ ಪ್ರಶ್ನೆಗೆ ‘ವಿನ್ನರ್’ ಎಂದಿದ್ದಾರೆ.

ನಿಮಗೆ ಶಾಂತಿ ನಿವಾಸ ಮತ್ತು ಮಾಣಿಕ್ಯ ತರ ಕಥೆ ಇಷ್ಟನಾ ಅಥವ ಹೆಬ್ಬುಲಿ ತರ ಇಷ್ಟನಾ ಅಂದಿದ್ದಕ್ಕೆ ‘ನಿಮ್ಮೆಲ್ಲರಿಗೂ ತೃಪ್ತಿ ಕೊಡುವ ಕಥೆ’ ಅಂತಾ ಹೇಳಿದ್ದಾರೆ.

ಹೀಗೆ ಸುದೀಪ ಅವರು, ತಮ್ಮ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಮೂಲಕ ನಟ ಕಿಚ್ಚ ಸುದೀಪ ಅವರ ದೃಷ್ಟಿಯಲ್ಲಿ ಇವರು ಹೇಗೆ ಅನ್ನೋ, ಅಭಿಮಾನಿಗಳ ತಲೆಯಲ್ಲಿ ಇಷ್ಟು ದಿನ ಕೊರೆಯುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದಂತಾಗಿದೆ.




Leave a Reply

Your email address will not be published. Required fields are marked *

error: Content is protected !!