ನಾಳೆ ಅಯೋಧ್ಯೆ ವಿಚಾರಣೆಯ ಕೊನೆಯ ದಿನ

331

ನವದೆಹಲಿ: ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದೆಂತೆ ನಾಳೆ ನಡೆಯುವ ವಿಚಾರಣೆ ಕೊನೆಯದಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ ಗೊಗೊಯ್ ಹೇಳಿದ್ದಾರೆ.

ಇಂದು ನಡೆದ ವಿಚಾರಣೆ 39ನೇ ದಿನದ್ದು. ನಾಳೆ 40ನೇ ದಿನದ್ದು ಮತ್ತು ಕೊನೆಯ ದಿನದ ವಿಚಾರಣೆ ಅಂತಾ ಹೇಳಿದ್ದಾರೆ.

ರಂಜನ ಗೊಗೊಯ್, ಮುಖ್ಯನ್ಯಾಯಮೂರ್ತಿ

2010ರ ಅಲಹಾಬಾದ್ ಕೋರ್ಟ್ ತೀರ್ಪನ್ನ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನ, ರಂಜನ ಗೊಗೊಯ್ ನೇತೃತ್ವದ ಪಂಚಸದಸ್ಯ ಪೀಠ ವಿಚಾರಣೆ ನಡೆಸ್ತಿದೆ. ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿ ನಿರ್ಮೋಹಿ ಅಖಾಡ್, ರಾಮ್ ಲಲ್ಲಾ ಹಾಗೂ ಸುನ್ನಿ ವಕ್ಫ್ ಮಂಡಳಿ ನಡುವೆ ಸಮಾನವಾಗಿ ಹಂಚಿಕೆ ಆಗಲು ಆದೇಶಿಸಿದೆ.

ಅಕ್ಟೋಬರ್ 17ಕ್ಕೆ ನಿಗದಿಯಾಗಿದ್ದ ಕೊನೆಯ ದಿನದ ವಿಚಾರಣೆಯನ್ನ ಒಂದು ದಿನ ಮೊದ್ಲೇ ಮುಗಿಸುವುದಾಗಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ. ಹೀಗಾಗಿ ನಾಳೆ ಇದರ ವಿಚಾರಣೆ ಕೊನೆಯದಾಗಿರಲಿದ್ದು, ಪ್ರಕರಣ ತೀರ್ಪು ನವೆಂಬರ್ 4 ಅಥವ 5ರಂದು ಬರಬಹುದು.




Leave a Reply

Your email address will not be published. Required fields are marked *

error: Content is protected !!